ಮೈಸೂರು ಪ್ರವಾಸಕ್ಕೆ ಹೋಗಬೇಕೆಂದುಕೊಂಡವರಿಗೆ ಇಲ್ಲಿದೆ ಗುಡ್ ನ್ಯೂಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮೇ 19-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮೈಸೂರು ಸಾರಿಗೆ ವಿಭಾಗದ ವತಿಯಿಂದ ದರ್ಶಿನಿ ಪ್ಯಾಕೇಜ್ ಆರಂಭಿಸಲಾಗಿದೆ.

ಮೈಸೂರಿಗೆ ಆಗಮಿಸುವ ಪ್ರವಾಸಿಕರ ಅನುಕೂಲಕ್ಕಾಗಿ ಮೈಸೂರಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ದರ್ಶಿನಿ ಪ್ಯಾಕೇಜ್‍ನ್ನು ಮೈಸೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಆರಂಭಿಸಲಾಗಿದೆ.

ಪ್ಯಾಕೇಜ್‍ನಲ್ಲಿ ಚಾಮುಂಡಿಬೆಟ್ಟಿ, ಮಕ್ಕಳ ಕಲೆಗಳ ಸಂಗ್ರಹಾಲಯ, ಪ್ರಾಕೃತಿಕ ಹಾಗೂ ಐತಿಹಾಸಿಕ ಸಂಗ್ರಹಾಲಯ, ಮೃಗಾಲಯ, ಮೈಸೂರು ಅರಮನೆ ಮತ್ತು ಕೆಆರ್‍ಎಸ್ ವೀಕ್ಷಿಸಬಹುದಾಗಿದೆ. ಕರ್ನಾಟಕ ಸಾರಿಗೆ ಹವಾನಿಯಂತ್ರಿತ ಬಸ್ ವ್ಯವಸ್ಥೆ ಮಾಡಲಾಗಿದೆ.

ಸಾಮಾನ್ಯ ಸಾರಿಗೆ ಬಸ್ ಪ್ರಯಾಣ ದರ 200 ರೂ., ವೋಲ್ವೋಗೆ 300ರೂ.ಗಳನ್ನು ನಿಗದಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯ ಸಂಚಾರ ವ್ಯವಸ್ಥಾಪಕ ಎಸ್.ಡಿ.ದಿನೇಶ್‍ಕುಮಾರ್, ಮೊ: 7760990761ನ್ನು ಸಂಪರ್ಕಿಸಬಹುದಾಗಿದೆ ಎಂದು ಮೈಸೂರು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin