ಸಾರಿಗೆ ಸಚಿವರಿಂದ ಕೆಎಸ್‌ಆರ್‌ಟಿಸಿ ಬಸ್‍ಗಳ ತಪಾಸಣೆ

ಈ ಸುದ್ದಿಯನ್ನು ಶೇರ್ ಮಾಡಿ

D-C-Tammanna--01

ಬೆಂಗಳೂರು, ಜೂ.26- ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ತಾವು ತೆರಳುತ್ತಿದ್ದ ಮಾರ್ಗಮಧ್ಯದಲ್ಲಿಯೇ ಕಾರು ನಿಲ್ಲಿಸಿ ಬಸ್‍ಗಳ ತಪಾಸಣೆ ನಡೆಸಿದರು. ಹಾಸನ ಮಾರ್ಗದಲ್ಲಿ ಚಲಿಸುತ್ತಿದ್ದ ಅವರು ಯಡಿಯೂರು ಸಮೀಪ ಕಾರು ನಿಲ್ಲಿಸಿ ಬೆಂಗಳೂರು- ಕುಂದಾಪುರ ಮಾರ್ಗದ ಐರಾವತ ಕ್ಲಬ್‍ಕ್ಲಾಸ್‍ನ ವೀಲ್‍ಡೋರ್ ಸಮೀಪ ನೆಟ್ ಇಲ್ಲದಿರುವುದನ್ನು ಗಮನಿಸಿ ನಿಗಮದ ಹಿರಿಯ ಅಧಿಕಾರಿಗಳಿಗೆ ಕೂಡಲೇ ಸರಿಪಡಿಸುವಂತೆ ಸೂಚಿಸಿದರು. ಇನ್ನು ಮುಂದೆ ಇಲ್ಲಿ ಚಲಿಸುವ ಬಸ್‍ಗಳಲ್ಲಿ ಯಾವುದೇ ರೀತಿಯ ನ್ಯೂನ್ಯತೆ ಇರದಂತೆ ಕ್ರಮ ವಹಿಸಬೇಕು ಎಂದು ಸಚಿವರು ಆದೇಶಿಸಿದರು. ಸಾರಿಗೆ ಸಚಿವರು ದಿನವಿಡೀ ನಿಗಮದ ಹಿರಿಯ ಅಧಿಕಾರಿಗಳೊಂದಿಗೆ ವಿಭಾಗ, ಘಟಕ, ಬಸ್ ನಿಲ್ದಾಣಗಳ ಪರಿಶೀಲನೆ ಮತ್ತು ಪರಿವೀಕ್ಷಣೆ ನಡೆಸಿದರು.

Facebook Comments

Sri Raghav

Admin