ಕುಲಭೂಷಣ್ ಜಾಧವ್ ಭೇಟಿಗೆ ಅಡೆತಡೆ ಇಲ್ಲದೆ ಪಾಕ್ ಅನುಮತಿ ನೀಡಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.17- ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ನೌಕಾಪಡೆಯ ನಿವೃತ್ತ ಯೋಧ ಕುಲಭೂಷಣ್ ಜಾಧವ್ ಭೇಟಿಗೆ ಅಡೆತಡೆ ಇಲ್ಲದ ಅನುಮತಿಯನ್ನು ಪಾಕ್ ಸರ್ಕಾರ ನೀಡಿಲ್ಲ. ಅವರು ಒತ್ತಡದಲ್ಲಿದ್ದಾರೆ ಎಂದು ಹೇಳಿದೆ.

ಇಂದು ಕೇಂದ್ರ ವಿದೇಶಾಂಗ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಪಾಕಿಸ್ತಾನದಲ್ಲಿ ಸೆರೆಯಾಳಾಗಿ ಮರಣದಂಡನೆ ಶಿಕ್ಷೆ ಪಡೆದಿರುವ ಭಾರತದ ನಿವೃತ್ತ ನೌಕಾಪಡೆ ಅಧಿಕಾರಿ ಕುಲಭೂಷಣ್ ಅವರಿಗೆ ರಾಜತಾಂತ್ರಿಕ ಸಂಪರ್ಕ ನೀಡುವ ವಿಚಾರದಲ್ಲಿ ಪಾಕಿಸ್ತಾನ ಅಪ್ರಾಮಾಣಿಕವಾಗಿ ನಡೆದುಕೊಂಡಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಆದೇಶವನ್ನು ಉಲ್ಲಂಘಿಸಿದೆ ಎಂದು ಭಾರತ ಸರ್ಕಾರ ಗಂಭೀರ ಆರೋಪ ಮಾಡಿದೆ. ಐಸಿಜೆ ಸೂಚನೆಯಂತೆ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೆ ಕುಲಭೂಷಣ್ ಅವರನ್ನ ಸಂಪರ್ಕಿಸುವ ಅವಕಾಶ ಕಲ್ಪಿಸಲಾಗಿತ್ತು ಎಂದು ಪಾಕಿಸ್ತಾನ ನಿನ್ನೆ ಹೇಳಿತ್ತು.

ಆದರೆ, ತಮಗೆ ತಡೆರಹಿತವಾಗಿ, ಬೇಷರತ್ ಆಗಿ ಮತ್ತು ಮುಕ್ತವಾಗಿ ಕುಲಭೂಷಣ್ ಜಾಧವ್ ಅವರೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಭಾರತ ಆಪಾದಿಸಿದೆ. ಈ ಭೇಟಿ ಆಗುವಾಗ ಕುಲಭೂಷಣ್ ಜಾಧವ್ ಜೊತೆ ಬೆದರಿಸುವ ರೀತಿಯಲ್ಲಿ ಪಾಕ್ ಅಧಿಕಾರಿಗಳು ಕೂತಿದ್ದರು.

ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಸಮೀಪದಲ್ಲೂ ಪಾಕ್ ಅಧಿಕಾರಿಗಳಿದ್ದರು. ಅಲ್ಲದೆ, ಈ ಸಂವಾದವನ್ನು ರೆಕಾರ್ಡ್ ಮಾಡಲಾಗುತ್ತಿತ್ತು. ಇದರಿಂದ ಮುಕ್ತವಾಗಿ ಮಾತನಾಡುವ ವಾತಾವರಣ ಅಲ್ಲಿರಲಿಲ್ಲ ಎಂದು ಭಾರತದ ವಿದೇಶಾಂಗ ಇಲಾಖೆ ನೀಡಿದ ಹೇಳಿಕೆಯಲ್ಲಿ ದೂರಲಾಗಿದೆ.

ಕನ್ಸುಲರ್ ಭೇಟಿಗೆ ಪಾಕಿಸ್ತಾನ ಮಾಡಿಕೊಟ್ಟ ವ್ಯವಸ್ಥೆ ಸರಿ ಇರಲಿಲ್ಲ. ಕುಲಭೂಷಣ್ ಜಾಧವ್ ಜೊತೆಗಿದ್ದ ಅಧಿಕಾರಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಅಲ್ಲಿಂದ ತೆರಳಿದರು. ಜಾಧವ್ಗೆ ಕಾನೂನು ನೆರವು ನೀಡುವ ಕುರಿತು ಮಾತನಾಡಲು ಆಗಿಲ್ಲ.

ಭಾರತದ ಅಧಿಕಾರಿಗಳಿಗೆ 2ನೇ ಬಾರಿಗೆ ಕುಲಭೂಷಣ್ ಜಾಧವ್ ಭೇಟಿ ಮಾಡಲು ಪಾಕಿಸ್ತಾನ ಅವಕಾಶ ನೀಡಿದೆ. ಮೊದಲ ಬಾರಿಗೆ 2019ರಲ್ಲಿ ಭೇಟಿಗೆ ಅವಕಾಶ ನೀಡಲಾಗಿತ್ತು. ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅವರು ಶಿಕ್ಷೆಯನ್ನು ಮರುಪರಿಶೀಲನೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.

ಐಸಿಜೆ ವಿಧಿಪಡಿಸಿದ ನಿಯಮಗಳ ಪ್ರಕಾರ ರಾಜತಾಂತ್ರಿಕ ಸಂಪರ್ಕ ಮುಕ್ತವಾಗಿರಬೇಕು. ಆದರೆ, ಪಾಕಿಸ್ತಾನ ಇದನ್ನ ಒದಗಿಸುವಲ್ಲಿ ವಿಫಲವಾಗಿದೆ.

ಪಾಕಿಸ್ತಾನದ ಈ ವರ್ತನೆ ವಿರುದ್ಧ ಇಂಟನ್ರ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್, ಅಥವಾ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ದೂರು ಸಲ್ಲಿಸುವ ಇರಾದೆಯಲ್ಲಿ ಭಾರತ ಸರ್ಕಾರ ಇದೆ ಎನ್ನುತ್ತಿವೆ ಮೂಲಗಳು.

Facebook Comments

Sri Raghav

Admin