ಖ್ಯಾತ ಗಾಯಕ ಕುಮಾರ್ ಶಾನುಗೆ ಕೊರೊನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.16- ಕಿಂಗ್ ಆಫ್ ಮೆಲೋಡಿ ಎಂದೇ ಪ್ರಸಿದ್ಧರಾಗಿರುವ ಜನಪ್ರಿಯ ಗಾಯಕ ಕುಮಾರ್ ಶಾನು (63) ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಪ್ರಸ್ತುತ ಅವರು ಪ್ರತ್ಯೇಕವಾಗಿದ್ದು, ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಅವರ ತಂಡ ಪೇಸ್‍ಬುಕ್‍ನಲ್ಲಿ ತಿಳಿಸಿದೆ.

ಬಾಲಿವುಡ್, ಸ್ಯಾಂಡಲ್‍ವುಡ್ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಹಸ್ರಾರು ಹಾಡುಗಳನ್ನು ಹಾಡಿರುವ ಕುಮಾರ್ ಶಾನು ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಅಕ್ಟೋಬರ್ 14ರಂದು ಅಮೆರಿಕದ ಲಾಸ್‍ಏಂಜಲೀಸ್‍ಗೆ ತೆರಳುವ ಕಾರ್ಯಕ್ರಮ ಇತ್ತು.

ಆದರೆ, ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಕಾರ್ಯಕ್ರಮ ರದ್ದಾಗಿದೆ ಎಂದು ಅವರ ತಂಡದ ಪ್ರತಿನಿಗಳು ಹೇಳಿದ್ದಾರೆ. ವಿಶ್ವವಿಖ್ಯಾತ ಗಾಯಕ ಕಿಶೋರ್‍ಕುಮಾರ್ ಅವರ ಯಥಾವತ್ ಗಾಯನ ಮೋಡಿಯಿಂದ ಪ್ರಸಿದ್ಧರಾಗಿರುವ ಕುಮಾರ್ ಶಾನು ಅವರು ಸಹಸ್ರಾರು ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಸಾವಿರಾರು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದ್ದಾರೆ.

Facebook Comments

Sri Raghav

Admin