ಪ್ರವಾಸಿಗರನ್ನು ಸ್ವಾಗತಿಸಲು ಸಿದ್ದಗೊಂಡಿದೆ ಕುಮಾರಕೃಪಾ ಅತಿಥಿ ಗೃಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.7-ಕೊರೋನಾ ಕರಿನೆರಳ ನಡುವೆಯೂ ಪ್ರವಾಸಿಗರನ್ನು ಸ್ವಾಗತಿಸಲು ಕುಮಾರಕೃಪಾ ಅತಿಥಿ ಗೃಹ ಸಿದ್ದಗೊಂಡಿದೆ. ನಗರದ ಕೆಲವು ಪ್ರಸಿದ್ಧ ಅತಿಥಿಗೃಹಗಳಲ್ಲಿ ಸರ್ಕಾರಿ ಒಡೆತನದಲ್ಲಿರುವ ಕುಮಾರಕೃಪಾ ಪ್ರಮುಖವಾದದ್ದು. ಕರ್ನಾಟಕದ ಅನೇಕ ರಾಜಕೀಯ ಸ್ಥಿತ್ಯಂತರಗಳಿಗೆ ಸಾಕ್ಷಿಯಾದ ಹೆಗ್ಗಳಿಕೆಯೂ ಇದಕ್ಕಿದೆ.

ಕರ್ನಾಟಕ ಚಿತ್ರಕಲಾ ಪರಿಷತ್ತು ಹಾಗೂ ಹೋಟೆಲ್ ಲಲಿತ್ ಅಶೋಕದ ಮಧ್ಯೆ ಕುಮಾರ ಕೃಪಾ ನೆಲೆಗೊಂಡಿದೆ. ಈ ಕಟ್ಟಡ ಇರುವ ರಸ್ತೆಯನ್ನು ಕುಮಾರಕೃಪಾ ರಸ್ತೆ ಎಂದೇ ಕರೆಯಲಾಗುತ್ತದೆ.

ನಗರದ ಕೆಲವು ಪ್ರಸಿದ್ಧ ಅತಿಥಿಗೃಹಗಳಲ್ಲಿ ಸರ್ಕಾರಿ ಒಡೆತನದಲ್ಲಿರುವ ‘ಕುಮಾರಕೃಪಾ’ ಪ್ರಮುಖವಾದದ್ದು. ಕರ್ನಾಟಕದ ಅನೇಕ ರಾಜಕೀಯ ಸ್ಥಿತ್ಯಂತರಗಳಿಗೆ ಸಾಕ್ಷಿಯಾದ ಹೆಗ್ಗಳಿಕೆಯೂ ಇದಕ್ಕಿದೆ. ಕೊರೋನಾ ವೈರಸ್ ಸೋಂಕು ವ್ಯಾಪಕವಾದ ಹಿನ್ನೆಲೆಯಲ್ಲಿ ಈ ಅತಿಥಿ ಗೃಹವನ್ನು ಕೆಲ ತಿಂಗಳ ಹಿಂದೆ ಬಂದ್ ಮಾಡಲಾಗಿತ್ತು. ಇದೀಗ ಮತ್ತೆ ಈ ಅತಿಥಿಗೃಹವನ್ನು ತೆರೆಯಲಾಗಿದ್ದು, ಕೊರೋನಾ ಭೀತಿ ಅಲ್ಲಿನ ಸಿಬ್ಬಂದಿಗಳಲ್ಲಿ ಹೆಚ್ಚಾಗಿ ಕಾಡತೊಡಗಿದೆ.

7 ಅಂತಸ್ತಿನ ಈ ಕಟ್ಟಡದಲ್ಲಿ ಒಟ್ಟು 180 ಕೊಠಡಿಗಳಿದ್ದು, ಇದರಲ್ಲಿ ಈಗಾಗಲೇ 100 ಕೊಠಡಿಗಳನ್ನು ಕೋವಿಡ್ ಕೇರ್ ಕೇಂದ್ರವಾಗಿ ಮಾರ್ಪಡಿಸಲಾಗಿದೆ. ಈ ಕೊಠಡಿಗಳಲ್ಲಿ ಶಾಸಕರು ಹಾಗೂ ಅಧಿಕಾರಿಗಳಿಗೆ ಕೊರೋನಾ ಸೋಂಕಿಗೆ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ.

ಉಳಿದಿರುವ 80 ಕೊಠಡಿಗಳಲ್ಲಿ ಭದ್ರತಾ ಕ್ರಮವಾಗಿ ಕೇವಲ ಶೇ.30 ಕೊಠಡಿಗಳನ್ನು ಮಾತ್ರ ತೆರೆದಿದ್ದೇವೆ. ಕೆಲ ಅಧಿಕಾರಿಗಳಿಗೆ ಮಾತ್ರ ಈ ಕೊಠಡಿಗಳನ್ನು ಇರಿಸಲಾಗಿದೆ. ಸಾಕಷ್ಟು ಭದ್ರತೆ, ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದರೂ ಅಧಿಕಾರಿಗಳು ನೆಲೆಯೂರಲು ಭೀತಿಗೊಳಗಾಗಿದ್ದಾರೆಂದು ಅತಿಥಿ ಗೃಹದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುಮಾರ ಕೃಪಾ ಅತಿಥಿ ಗೃಹ, ಮಡಿಕೇರಿಯ ಬಾಗಮಂಡಲ ಅತಿಥಿ ಗೃಹ ಮತ್ತು ಚಿತ್ರದುರ್ಗ, ಯಗಚಿ, ಬೇಲೂರಿನ ಹೋಟೆಲ್ ಗಳನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ನಿಗಮದ (ಕೆಎಸ್ಟಿಡಿಸಿ) ನಿರ್ವಹಿಸುತ್ತಿದೆ.  ಎಲ್ಲಾ ಹೋಟೆಲ್ ಹಾಗೂ ಅತಿಥಿ ಗೃಹಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದ್ದು, ಜನರು ಭೀತಿಗೊಳಗಾಗಬಾರದು. ಜನರು ಸೋಂಕಿಗೊಳಗಾದ ಹೋಟೆಲ್ ಗಳು ಇವಲ್ಲ. ಪ್ರವಾಸ ಮಾಡುವಾಗ ಜನರು ಸೋಂಕಿಗೊಳಗಾಗುತ್ತಿದ್ದಾರೆ.

ಅತಿಥಿ ಗೃಹಗಳ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಕೆಎಸ್ಟಿಡಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.  ಕೋವಿಡ್ ಕೇರ್ ಕೇಂದ್ರಗಳಾಗಿ ಮಾರ್ಪಟ್ಟಿರುವ ಹೋಟೆಲ್ ಹಾಗೂ ಕೊಠಡಿಗಳನ್ನು ಮರಳಿ ಅತಿಥಿ ಗೃಹವಾಗಿ ಮಾರ್ಪಡಿಸಲು ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಸರ್ಕಾರ ಆದೇಶ ನೀಡಿದ ಬಳಿಕ ಎಲ್ಲವನ್ನೂ ಸರಿಪಡಿಸಲಿದ್ದೇವೆ. ಸರ್ಕಾರ ಆದೇಶ ನೀಡಿದ 1 ತಿಂಗಳಿನಲ್ಲಿ ಕೊಠಡಿಗಳು ಹಾಗೂ ಹೋಟೆಲ್ ಗಳನ್ನು ಮೊದಲಿನಂತೆ ಅತಿಥಿ ಗೃಹಗಳಾಗಿ ಮಾರ್ಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Facebook Comments