ರೈತ ಪರ ಸರ್ಕಾರ ಬೆಂಬಲಿಸಿ : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಏ.12-ನಿಮ್ಮ ಕುಟುಂಬದ ಮಕ್ಕಳಾಗಿ ನಿಮ್ಮಗಳ ಸೇವೆ ಮಾಡುತ್ತಿರುವ ಅಭ್ಯರ್ಥಿಗೆ ಮತ ನೀಡಿ ರೈತ ಪರ ಸರ್ಕಾರವನ್ನು ಬೆಂಬಲಿಸುವಂತೆ ಮುಖ್ಯಮಂತ್ರಿ ಹೆಚ್.ಡಿ .ಕುಮಾರಸ್ವಾಮಿ ಅವರು ಮನವಿ ಮಾಡಿದರು.

ಮಳವಳ್ಳಿ ಪಟ್ಟಣದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೇಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ನೆಡೆಸಿ ಮಾತನಾಡಿ ಬಿಜೆಪಿ ನಾಯಕರು ಸದನದಲ್ಲಿ ಮಂಡ್ಯಕ್ಕೆ ಹೆಚ್ಚು ಅನುದಾನ ನೀಡಿರುವ ಬಗ್ಗೆ ರಾಜ್ಯ ಸರ್ಕಾರದ ಬಜೆಟ್‍ನ್ನು ಮಂಡ್ಯ ಬಜೆಟ್ ಎಂದು ಟೀಕಿಸುತ್ತಾರೆ

ಚುನಾವಣೆಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗೆ ಮತನೀಡಿ ಎಂದು ಮನವಿ ಮಾಡುತ್ತಾರೆ ಇಂತಹವರಿಗೆ ಮತ ನೀಡುತ್ತೀರೋ ಅಥವಾ ನಿಮ್ಮ ಕುಟುಂಬದ ಮಕ್ಕಳಾಗಿ ನಿಮ್ಮ ಸೇವೆ ಮಾಡುತ್ತಿರುವ ಅಭ್ಯರ್ಥಿಗೆ ಮತನೀಡುತ್ತೀರೋ ನೀವೇ ಆಲೋಚಿಸಿ ತೀರ್ಮಾನ ಕೈಗೊಳ್ಳಿ ಎಂದು ಹೇಳಿದರು.

ಜಿಲ್ಲೆಯ ರೈತರ ಜೀವನಾಡಿ ಮೈಷುಗರ್ ಕಾರ್ಖಾನೆ ಮುಚ್ಚುವ ಪರಿಸ್ಥಿತಿಯಲ್ಲಿತ್ತು ಕಾರ್ಖಾನೆಗೆ ಮರುಜೀವ ಕೊಡುವ ನಿಟ್ಟಿನಲ್ಲಿ ಹೊಸ ಕಾರ್ಖಾನೆಗೆ ಶಂಕು ಸ್ಥಾಪನೆ ಮಾಡಿದ್ದು ಈಗಾಗಲೇ 100ಕೋಟಿ ರೂ ಅನದಾನವನ್ನು ಬಿಡುಗಡೆ ಮಾಡಲಾಗಿದೆ ರೈತರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ 47ಸಾವಿರ ಕೋಟಿ ರೂ ರೈತರ ಸಾಲವನ್ನಾ ಮಾಡಲು ಮುಂದಾಗಿದ್ದೇನೆ

ಜಿಲ್ಲೆಗೆ 400 ಕೋಟಿ ರೂ ಬಿಡುಗಡೆ ಮಾಡಿದ್ದೇನೆ ಚುನಾವಣೆ ಮುಗಿದ ಬಳಿಕ ಕೃಷಿಯಲ್ಲಿ ಸಮಗ್ರ ಬದಲಾವಣೆ ಕೈಗೊಂಡು ರೈತರ ರಕ್ಷಣೆಗೆ ಹಲವಾರು ಯೋಜನೆಗಳನ್ನು ಜಾರಿ ಮಾಡಲು ಉದ್ದೇಶಿಸಿದ್ದೇನೆ ಎಂದು ತಿಳಿಸಿದರು.

ಮಳವಳ್ಳಿ ತಾಲ್ಲೂಕುನ್ನು ಡಾ//ನಂಜುಂಡಯ್ಯ ವರದಿಯಲ್ಲಿ ಹಿಂದುಳಿದ ತಾಲ್ಲೂಕುಗಳ ಪಟ್ಟಗೆ ಸೇರಿಸಿ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದ್ದೇನೆ ಮತ್ತು ತಾಲ್ಲೂಕು ನೀರಾವರಿಯಿಂದ ವಂಚಿತವಾಗಿದ್ದ ಏಕೈಕ ಹೋಬಳಿ ಹಲಗೂರು ಜಲಮೂಲಗಳು ಬತ್ತಿ ಹೋಗಿರುವುದರಿಂದ ಈ ಹೋಬಳಿಗೆ ನೀರಾವರಿ ಯೋಜನೆಗೆ ಎಂದು ಸುಮಾರು 600 ಕೋಟಿ ರೂ ಗಳನ್ನು ಬಜೆಟ್‍ನಲ್ಲಿ ನೀಡಲಾಗಿದೆ ಎಂದರು.

ತಾವು ಅಭಿಮಾನ ಅನುಕಂಪಕ್ಕೆ ಬಂದಿದ್ದೇವೆ ರಾಜಕೀಯ ಮಾಡಲು ಬಂದಿಲ್ಲ ಎಂದು ಹೇಳುತ್ತಾರೆ ರಾಜಕೀಯ ಬೇಡ ಅಂದ ಮೇಲೆ ಚುನಾವಣೆ ಏಕೆ ಬೇಕಿತ್ತು ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‍ರನ್ನು ಕುಮಾರಸ್ವಾಮಿ ಪರೋಕ್ಷವಾಗಿ ಸಿಎಂ ಪ್ರಶ್ನಿಸಿದರು.

ನಾನು ಅಧಿಕಾರ ದುರುಪಯೋಗ ಪಡಿಸಿಕೊಂಡು ಮತ ಹಾಕಿಸಿಕೊಳ್ಳಬೇಕಾ? ಎಂದು ಅವರು ಕಿಡಿಕಾರಿದರು, ಅಧಿಕಾರ ಪಡೆದುಕೊಂಡು ನಾನು ನೆಮ್ಮದಿಯಾಗಿದ್ದೇನೆ ಅಂದುಕೊಂಡಿದ್ದೀರಾ? ಕಳೆದ 8ತಿಂಗಳಿನಿಂದ ನಿರಂತರವಾಗಿ ಇವತ್ತು ಹೋಗುತ್ತಾನೆ ನಾಳೆ ಹೋಗುತ್ತಾನೆ ಅಂತಾ ಬಿಂಬಿಸುತ್ತಿದ್ದಾರೆ ನನಗೆ ಮಾನಸಿಕವಾಗಿ ಎಷ್ಟೇ ತೊಂದರೆಯಾದರೂ 5ವರ್ಷಗಳು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಸ್ಥಳೀಯ ಶಾಸಕ ಡಾ.ಕೆ,ಅನ್ನದಾನಿ,ವಿಧಾನ ಪರಿಷತ್ತು ಸದಸ್ಯ ಮರಿತಿಬ್ಬೇಗೌಡ,ಸಚಿವ ಡಿ,ಕೆ,ಶಿವಕುಮಾರ್,ಹಿಂದುಳಿ ವರ್ಗದ ಅಧ್ಯಕ್ಷ ಡಿ,ಜಯರಾಮು ಸೇರಿದಂತೆ ಮುಖಂಡರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಾಥ್ ನೀಡಿದರು,

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ