ಒಕ್ಕಲಿಗರ ಪ್ರಾಧಿಕಾರ ರಚನೆಗೆ ಎಚ್‍ಡಿಕೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ರಾಜ್ಯ ಸರ್ಕಾರ ಮತ ಬ್ಯಾಂಕ್‍ಗಾಗಿ ಪ್ರಾಧಿಕಾರ ರಚನೆ ಮಾಡುತ್ತಿದೆ ಎಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲು ಒಕ್ಕಲಿಗ ಸಮುದಾಯಕ್ಕೆ ಪ್ರಾಕಾರ ಮಾಡಬೇಕಾಗಿತ್ತು ಎಂದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ವಾರ್ಡ್ ಕಚೇರಿ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಾಕಾರ ರಚನೆ ಮಾಡುವುದು ತಾತ್ಕಾಲಿಕ ಅಷ್ಟೆ.

ಇದು ಸಣ್ಣ ಮಟ್ಟದ ರಾಜಕಾರಣ. ಒಕ್ಕಲಿಗ ಸಮುದಾಯದ ತ್ಯಾಗ, ಸೇವೆ ದೊಡ್ಡದಾಗಿದ್ದು ಬೆಂಗಳೂರಿಗೆ ಒಕ್ಕಲಿಗರ ಕೊಡುಗೆ ದೊಡ್ಡದಿದೆ. ಹಾಗೆ ನೋಡಿದರೆ ಮೊದಲು ಒಕ್ಕಲಿಗ ಸಮುದಾಯಕ್ಕೆ ಪ್ರಾಕಾರ ಮಾಡಬೇಕಿತ್ತು ಎಂದು ತಿಳಿಸಿದರು. ನಿಗಮ ಪ್ರಾಕಾರ ರಚನೆ ವಿಚಾರದಲ್ಲಿ ಸರ್ಕಾರದಿಂದ ಗೊಂದ ಸೃಷ್ಠಿಯಾಗಿದೆ. ಮತಕ್ಕೋಸ್ಕರ ಪ್ರಾಕಾರ ರಚನೆ ಮಾಡುವುದು ಸೂಕ್ತವಲ್ಲ.

ಸರ್ಕಾರ ಘೋಷಣೆ ಮಾಡುವ ಮುನ್ನವೇ ಸ್ಪಷ್ಟವಾಗಿ ಮನವರಿಕೆ ಮಾಡಬೇಕಿತ್ತು. ಈಗ ಭಾಷೆ ಭಾಷೆಗಳ ನಡುವೆ ಸಂಘರ್ಷ ಶುರುವಾಗಿದೆ. ಕನ್ನಡ ಪರ ಸಂಘಟನೆಗಳನ್ನು ದಬ್ಬಾಳಿಕೆಯಿಂದ ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಿದೆ. ಇದರ ಬದಲು ಪ್ರಾಕಾರ ರಚನೆಯ ಉದ್ದೇಶದ ಬಗ್ಗೆ ಕನ್ನಡಪರ ಸಂಘಟನೆಗಳ ಜೊತೆ ಚರ್ಚೆ ಮಾಡಿ ಮನವರಿಕೆ ಮಾಡಿಕೊಡಬೇಕಿತ್ತು ಎಂದರು.

ಪದವಿ ಕಾಲೇಜು ಆರಂಭವಾದ ಎರಡೇ ದಿನಗಳಲ್ಲಿ ಕೋವಿಡ್ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವ ಮಾಹಿತಿ ಇದೆ. ಅಲ್ಲದೇ ಕೋವಿಡ್‍ನ ಎರಡನೇ ಅಲೆ ಬರಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಮಕ್ಕಳ ಜೀವನದ ಬಗ್ಗೆ ಸರ್ಕಾರ ಗಂಭೀರ ಗಮನವಿಟ್ಟು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಶಾಲೆ ಆರಂಭದ ಬಗ್ಗೆ ತರಾತುರಿ ಮಾಡುವುದು ಬೇಡ. ಸಮಗ್ರ ಸಮಾಲೋಚನೆ ಮಾಡಿದ ನಂತರವಷ್ಟೇ ಯೋಗ್ಯ ನಿರ್ಧಾರ ಕೈಗೊಳ್ಳಬೇಕೆಂದು ಕುಮಾರಸ್ವಾಮಿ ಒತ್ತಾಯಿಸಿದರು.

ಉಪಚುನಾವಣೆ ಸ್ಪರ್ಧೆ ವ್ಯರ್ಥ:
ಮುಂಬರುವ ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವುದು ವ್ಯರ್ಥ. ಈಗಿನ ಪರಿಸ್ಥಿತಿ ಗಮನಿಸಿದರೆ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಬೇಡ ಅನ್ನಿಸುತ್ತದೆ ಎಂದರು.

ನಮಗೆ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮುಖ್ಯವಾಗಿದ್ದು ಈಗಿನ ಉಪಚುನಾವಣೆಯಲ್ಲಿ ಸ್ರ್ಪಸುವುದು ವ್ಯರ್ಥ. ಆದರೂ ಎರಡೂ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಇನ್ನೂ ಜೆಡಿಎಸ್ ಬದುಕಿದೆ. ಮಂಡ್ಯದಲ್ಲಿ ಸೋತ ನಂತರ ನಮ್ಮ ಮುಂದೆ ಸಾಕಷ್ಟು ಸವಾಲು ಎದುರಾಗಿದೆ. ಪಕ್ಷ ಸಂಘಟನೆಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

Facebook Comments