ಚನ್ನಪಟ್ಟಣ ಏತನೀರಾವರಿಯಲ್ಲಿ ಗೋಲ್‍ಮಾಲ್ : ಯೋಗೇಶ್ವರ್ ವಿರುದ್ಧ ಎಚ್‍ಡಿಕೆ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಜ.23- ಚನ್ನಪಟ್ಟಣ ತಾಲೂಕಿನಲ್ಲಿ ಏತನೀರಾವರಿ ಯೋಜನೆಯಲ್ಲಿ ಗೋಲ್‍ಮಾಲ್ ಮಾಡಿದಂತೆ ಇಡೀ ರಾಜ್ಯದಲ್ಲೂ ಮಾಡಬೇಡಿ, ಒಳ್ಳೆ ಕೆಲಸ ಮಾಡಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೂತನ ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್‍ಗೆ ಟಾಂಗ್ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆಪೆ ಪೈಪ್‍ಲೈನ್ ಹಾಕಿ ಹಣ ಮಾಡಿದ ಪರಿಣಾಮ, ತಾಲೂಕಿನ ಸಾಕಷ್ಟು ಗ್ರಾಮಗಳಿಗೆ ಸರಿಯಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆರೆಗಳಿಗೆ ನೀರು ತುಂಬಿಸುವ ಹೊಣೆ ಇದೀಗ ನನ್ನ ಮೇಲೆ ಹೊರಿಸಿದ್ದಾರೆ. ರಾಜ್ಯದಲ್ಲೂ ಇಂತಹುದೇ ಕೆಲಸ ನಡೆಯುವುದು ಬೇಕಿಲ್ಲ ಎಂದು ಕಾಲೆಳೆದರು.

ಸಣ್ಣ ನೀರಾವರಿ ಸಚಿವರಾಗಿ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿ, ಕ್ಷೇತ್ರದ ಹೆಸರು ಉಳಿಸಿ ಎಂದು ಸಲಹೆ ನೀಡಿದ ಅವರು, ನಿಮ್ಮ ಇಲಾಖೆಯನ್ನು ಸರಿಯಾಗಿ ನಡೆಸುವುದನ್ನು ಕಲಿತು, ಗುಣಾತ್ಮಕ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಸಚಿವರು ರಾಜ್ಯಕ್ಕೆ ಸಚಿವರಷ್ಟೇ, ಅವರು ಚನ್ನಪಟ್ಟಣದ ಒಂದು ಅಂಗಮಾತ್ರ, ಈಕ್ಷೇತ್ರದ ಶಾಸಕನಾಗಿ ನನಗೆ ಹೆಚ್ಚಿನ ಅಧಿಕಾರ ಇದೆ. ಅವರು ಇತರರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಡಬೇಕು, ಈತರ ಮಾತನಾಡಿದರೆ ನನ್ನ ಮೇಲೆ ಅಭಿಮಾನ ಇರುವ ಜನರು ಇನ್ನಷ್ಟು ಬಿಗಿಯಾಗುತ್ತಾರೆ ಎಂದು ಎಚ್ಚರಿಸಿದರು.

Facebook Comments