ಕುಡಿಯಲು ನದಿ ನೀರು ಬಳಕೆ ಯೋಜನೆಗೆ 40 ಸಾವಿರ ಕೋಟಿ ರೂ ಅಗತ್ಯ : ಎಚ್’ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

kumara-swmy

ಬೆಂಗಳೂರು, ಮೇ 30- ನದಿ ಮೂಲದಿಂದ ಕುಡಿಯುವ ನೀರನ್ನು ಒದಗಿಸಲು ಯೋಜನೆ ಜಾರಿಗೆ ತರುವ ಉದ್ದೇಶವಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.  ವಿಧಾನ ಸಭೆಯ ಸಮ್ಮೆಳನ ಸಂಭಾಗಣದಲ್ಲಿ ಇಂದು ಕೃಷಿ ಸಾಲ ಮನ್ನಾ ಸಂಬಂಧ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ನದಿ ಮೂಲದಿಂದ ನೀರು ಒದಗಿಸುವ ಯೋಜನೆಗೆ ಸುಮಾರ 40 ಸಾವಿರ ಕೋಟಿ ರೂ ಅಗತ್ಯವಿದೆ ಎಂದು ಹೇಳಿದರು. ಸರ್ಕಾರದ ಸಂಪನ್ಮೂಲಗಳಿಂದ ಇದು ಸಾಧ್ಯವಾಗುವುದಿಲ್ಲ ಹಾಗಾಗಿ ಬಡ್ಡಿ ರಹಿತ ಸಾಲ ತರಬೇಕಿದೆ ಇಂತಹ ಮಹತ್ವದ ಯೋಜನೆಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರ ಸಲಹೆ ಪಡೆಯಲಾಗುವುದು ಎಂದು ತಿಳಿಸಿದರು. ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಪ್ರಣಾಳಿಕೆಗಳ ಅಂಶಗಳ ಅನುಷ್ಠಾನದ ಜವಾಬ್ದಾರಿ ನಮ್ಮ ಮೇಲಿದೆ ನೀವು ಸರ್ಕಾರದಲ್ಲಿ ಭಾಗಿಯಾಗದಿದ್ದರೂ ನಿಮ್ಮ ನಂಬಿಕೆ, ನಿರೀಕ್ಷೆಯನ್ನು ಉಳಿಸಿಕೊಳ್ಳುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರು

Facebook Comments

Sri Raghav

Admin