‘ಸಿದ್ದರಾಮಯ್ಯನವರ ಎಲ್ಲ ನಾಟಕಗಳೂ ನಂಗೆ ಗೊತ್ತಿದೆ’ : ಕುಮಾರಸ್ವಾಮಿ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ವಯಂಕೃತ ಅಪರಾಧ ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಸೋಲಿಗೆ ಕಾಂಗ್ರೆಸ್ ಸೋಲು ಅಂತ ನಾನು ಹೇಳುವುದಿಲ್ಲ. ನಾನು ಮಾಡಿದ ತಪ್ಪಿನಿಂದ ಸೋಲಾಯಿತು ಅಂತ ಹೇಳುತ್ತೇನೆ ಎಂದರು.

ಸಿದ್ದರಾಮಯ್ಯನವರು ನಿನ್ನೆ ಸ್ವಾಭಿಮಾನದ ಭಾಷಣ ಮಾಡಿದ್ದಾರೆ. ಆದರೆ, ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಸಾಯುತ್ತಿದ್ದಾರೆ. ಈಗ ಸಿದ್ದರಾಮಯ್ಯನವರ ಸ್ವಾಭಿಮಾನ ಎಲ್ಲಿ ಹೋಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ಇವರ ನಾಟಕ ಎಲ್ಲ ನನಗೆ ಗೊತ್ತಿದೆ. ಮಂಡ್ಯದಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಏನ್ ಏನ್ ಮಾಡ್ತಿದ್ದಾರೆ. ಎಲ್ಲವೂ ನನಗೆ ಗೊತ್ತಿದೆ ಎಂದು ಗುಡುಗಿದರು.

ಸಿದ್ದರಾಮಯ್ಯನವರು ಹೊಸಕೋಟೆಯಲ್ಲಿ ಮಾಡಿದ ಭಾಷಣ ಕೇಳಿದ್ದೇನೆ. ದೇವೇಗೌಡರ ಸೋಲು, ಮಂಡ್ಯದಲ್ಲಿ ನಮ್ಮ ಸೋಲು ಇರಬಹುದು. ಲೋಕಸಭೆಯಲ್ಲಿ ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪನವರ ಸೋಲಿಗೆ ಕಾರಣ ಯಾರು ? ಅಂತ ಹೇಳಲಿ ಎಂದು ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದರು.

ಕಳೆದ ಲೋಕಸಭೆ ಚುನಾವಣೆ ಮೈತ್ರಿ ಯ ಫಲಿತಾಂಶದ ಬಗ್ಗೆ ನಾನು ಮಾತನಾಡಿರಲಿಲ್ಲ, ನಿನ್ನೆ ಹೋಸಕೋಟೆಯಲ್ಲಿ ಸಿದ್ದರಾಮಯ್ಯನವರು ಆಡಿದ ಮಾತನ್ನು ಕೇಳಿದ್ದೇನೆ.

ಸಿದ್ದರಾಮಯ್ಯನವರ ನೇತೃತ್ವದಲ್ಲೆ ಮಂಡ್ಯ, ತುಮಕೂರು, ಕೋಲಾರ ಸೋಲಲಿಕ್ಕೆ ಕಾರಣ ಯಾರೆಂದು ಹೇಳಬೇಕು, ಹದ್ದಾಗಿ ಕುಕ್ಕಿತಲ್ಲೊ ಎಂದು ಹೇಳಿದವರು ಸ್ಪಷ್ಟ ಪಡಿಸಬೇಕು. 7 ಬಾರಿ ಗೆದ್ದ ಮುನಿಯಪ್ಪನವರನ್ನು ಕುಕ್ಕಿದ್ದು ಯಾರು ಎಂದು ಅವರು ಹೇಳಬೇಕು, ಇವರ ನಾಟಕ ಎಲ್ಲಾ ಗೊತ್ತಿದೆ ನನಗೆ ಎಂದು ಪರೋಕ್ಷವಾಗಿ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಸರಿಯಾಗಿ ಕೆಲಸ ಮಾಡಿಲ್ಲ. ನಾನು ಹೇಗೆ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದೆ ಅಂತ ಎಲ್ಲರಿಗೂ ಗೊತ್ತು. ಕಾಂಗ್ರೆಸ್ ನವರು ಅವರ ಆತ್ಮಕ್ಕೆ ಪ್ರಶ್ನೆ ಮಾಡಿಕೊಳ್ಳಲಿ. ಪ್ರಾಮಾಣಿಕವಾಗಿ ನಾವು ಕೆಲಸ ಮಾಡಿದ್ದೆವೆ.

ಕಾಂಗ್ರೆಸ್ ನಾಯಕರ ನಡವಳಿಕೆಯನ್ನು ಜನಗಮನಿಸಿದ್ದಾರೆ. ಕಾಂಗ್ರೆಸ್ ನಾಯಕರು ಬಿಜೆಪಿ ಜೊತೆ ಸೇರಿ ಅಭ್ಯರ್ಥಿ ಗೆಲ್ಲಿಸಿದರಲ್ಲ, ಅವರಿಗೆ ನಾಚಿಕೆ ಆಗಲ್ವಾ, ಇಂತಹ ಕೀಳುಮಟ್ಟದ ರಾಜಕಾರಣ ನಡೆಯುತ್ತಿದೆ, ಅದರಿಂದ ಯಾರ ಸಹವಾಸ ಬೇಕಿಲ್ಲ, ನೆಮ್ಮದಿ ಯಿಂದ ಜನತೆ ವಿಶ್ವಾಸ ಗಳಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

Facebook Comments

Sri Raghav

Admin