ಕುರುಬರ ST ಹೋರಾಟ ಸಮಿತಿಯ ರಾಜ್ಯ ಪದಾಧಿಕಾರಿಗಳ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೆ ಮುಂದುವರಿಯಲಿದೆ.ಮುಂದಿನ ಹೋರಾಟದ ರೂಪ ರೇಷೆಗಳನ್ನು ಸದ್ಯದಲ್ಲೇ ನಿರ್ಧರಿಸಲಾಗುವುದು. ಶ್ರೀಈಶ್ವರಾನಂದಪುರಿ ಸ್ವಾಮಿಗಳು:ಸರ್ಕಾರದ ಗಮನ ಸೆಳೆಯಲು ಹೋರಾಟ ನಡೆಸಲಾಗುತ್ತಿದೆ. ನಮ್ಮ ಹೋರಾಟ ಯಾರ ಪರ ಇಲ್ಲವೆ ವಿರುದ್ದವೂ ಅಲ್ಲ.ರಾಜ್ಯ ಸರ್ಕಾರ ಈವರೆಗೆ ನಮ್ಮ ಹೋರಾಟಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಹೋರಾಟವನ್ನು ನಿರಂತರ ಚಾಲನೆಯಲ್ಲಿ ಇಡಬೇಕಿದೆ.ಸಚಿವ ಈಶ್ವರಪ್ಪನವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಭೇಟಿ ಗೆ ಕಾಲ ನಿಗದಿ ಪಡಿಸಬೇಕಿದೆ.

ಕೇಂದ್ರ ಸರ್ಕಾರದ ಗಮನ ಸೆಳೆಯಲು ದಕ್ಷಿಣ ಭಾರತದ ಕುರುಬರ ಸಮಾವೇಶ ನಡೆಯಬೇಕಿದೆ. ಯಾವುದೇ ಪಕ್ಷಕ್ಕೆ ಸೀಮಿತ ವಾದ ಸಮಾಜ ನಮ್ಮದಲ್ಲ.ಸಮಾಜದ ಮುಖಂಡರನ್ನು ಪಕ್ಷ ಬೇಧ ಮರೆತು ನಾವು ಬೆಂಬಲಿಸಬೇಕಿದೆ. ಕೊಡಗಿನ ಕುರುಬರು ಈಗಾಗಲೇ ಎಸ್ ಟಿ ಪಟ್ಟಿಯಲ್ಲಿ ಇರುವುದರಿಂದ ಅದನ್ನೇ ಇಡೀ ರಾಜ್ಯಕ್ಕೆ ವಿಸ್ತರಿಸಬೇಕು. ಹಾಗಾಗಿ,ಕುಲಶಾಸ್ತ್ರಿಯ ಅಧ್ಯಯನದ ಅಗತ್ಯ ಇಲ್ಲ.

# ಬಂಡೆಪ್ಪ ಕಾಶಂಪುರ(ಮಾಜಿ ಸಚಿವ,ಜೆಡಿಎಸ್ ಶಾಸಕ):
ರಾಜ್ಯ ಎಂದೂ ಕಂಡರಿಯದ ಸಮಾವೇಶ ಮಾಡಿದ್ದೇವೆ.ಹೋರಾಟದ ಕಾವು ಹಾರದ ರೀತಿಯಲ್ಲಿ ಹೋರಾಟ ಮುಂದುವರಿಯಬೇಕಿದೆ. ಕೆ.ಮುಕಡಪ್ಪ:(ಗೌರವಾಧ್ಯಕ್ಷರು):ರಾಜಕೀಯ ನಾಯಕರ ವೈಫಲ್ಯದಿಂದ ಈವರೆಗೆ ಕುರುಬರು ಎಸ್ ಟಿ ಪಟ್ಟಿಗೆ ಸೇರಲಾಗಿಲ್ಲ.ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸಬಾರದೆಂಬ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿಕೆ ಖಂಡನಾರ್ಹ.

# ಎಚ್.ವಿಶ್ವನಾಥ್(ಮಾಜಿ ಸಚಿವ,ವಿಧಾನಪರಿಷತ್ ಸದಸ್ಯ):
ಪಕ್ಷ ಬೇಧ ಮರೆತು ರಾಜ್ಯದ ಕುರುಬರು ಒಗ್ಗಟ್ಟನ್ನು ಪ್ರದರ್ಶಿಸಲು ಎಸ್ ಟಿ ಹೋರಾಟ ವೇದಿಕೆಯಾಗಿದೆ.ಸಮಾಜ ಸಂಘಟಿತರಾಗಿರುವುದರಿಂದ,ಮಠ ಅಸ್ತಿತ್ವಕ್ಕೆ ಬಂದಿರುವುದರಿಂದಲೇ ಮುಖ್ಯಮಂತ್ರಿ ಯಾಗಲು ಸಾಧ್ಯವಾಯಿತು.ಹಾಗಾಗಿ,ಪ್ರತ್ಯೇಕ ಹೋರಾಟ, ಧರಣಿ ಬೇಡ. ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಜಾರಿಳಿಗೊಳಿಸಿ.ಮಿಸಲಾತಿ ಕುರಿತು ರಾಜ್ಯ ಸರ್ಕಾರದ ಉದ್ದೇಶಿತ ಸಮಿತಿ ರಚನೆ ಬೇಡ.ಸಂಘಟಿತ ಹೋರಾಟ ಮತ್ತಷ್ಟು ಗಟ್ಟಿಯಾಗಬೇಕಿದೆ.

# ಸಚಿವ ಕೆ.ಎಸ್.ಈಶ್ವರಪ್ಪ:
ಕಳೆದ 70 ವರ್ಷಗಳಿಂದ ಕುರುಬರಿಗೆ ಮೀಸಲಾತಿ ಪಡೆಯುವ ಸಂಬಂಧ ಯಾರೂ ಮಾತನಾಡದೆ ಈಗ ಸಮಾಜದ ಜಗದ್ಗುರುಗಳು ಪ್ರಾರಂಭ ಮಾಡಿದ ಮೇಲೆ ಎಲ್ಲರೂ ಎಚ್ಚೆತ್ತುಕೊಂಡಿರುವುದು ದುರ್ದೈವ. ಶ್ರೀ ನಿರಂನಾನಂದಪುರಿ ಸ್ವಾಮಿಜಿ:ಪಾದಯಾತ್ರೆ ನಿರೀಕ್ಷೆ ಮೀರಿ ಯಶಸ್ಸು ಕಂಡಿದೆ.ಏಪ್ರಿಲ್ 3ರಂದು ಪಾದಯಾತ್ರೆಯ ಲೆಕ್ಕ ಪತ್ರ ನೀಡುವೆ.

Facebook Comments

Sri Raghav

Admin