ಬಿಜೆಪಿ ಪರ ವಾಲಿದ ಕುರುಬ ಸಮಾಜ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2- ಉಪ ಚುನಾವಣಾ ಕಣದಲ್ಲಿ ನಡೆಯುತ್ತಿರುವ ಜಾತಿ ರಾಜಕಾರಣಕ್ಕೆ ಈಗ ಟ್ವಿಸ್ಟ್ ದೊರೆತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೇ ಕುರುಬ ಸಮುದಾಯದ ಅಸ್ತ್ರ ಪ್ರಯೋಗ ಮಾಡಲಾಗುತ್ತಿದೆ. ಕುರುಬ ಸಮುದಾಯ ನಿರ್ಣಾಯಕವಾಗಿರುವ ನಾಲ್ಕು ಕ್ಷೇತ್ರಗಳನ್ನೇ ಬಿಜೆಪಿ ಟಾರ್ಗೆಟ್ ಮಾಡಿಕೊಂಡಿದೆ.

ಯಡಿಯೂರಪ್ಪ ಕ್ಯಾಬಿನೆಟ್‍ನಲ್ಲಿ ಕುರುಬ ಸಮುದಾಯದ 5 ಜನ ಮಂತ್ರಿಯಾಗುತ್ತಾರೆ ಎಂಬ ಅಸ್ತ್ರ ಪ್ರಯೋಗ ಮಾಡಲಾಗಿದೆ. ಇದು ರಾಜ್ಯ ರಾಜಕಾರಣ ಇತಿಹಾಸದಲ್ಲಿ ಉಳಿಯಲಿದೆ ಎಂಬ ಸಂದೇಶ ರವಾನಿಸಿ ಪ್ರಚಾರ ಅಸ್ತ್ರವನ್ನಾಗಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕುರುಬ ಸಮುದಾಯದವರಾದ ಈಶ್ವರಪ್ಪ ಈಗಾಗಲೇ ಮಂತ್ರಿಯಾಗಿ ದ್ದಾರೆ. ರಾಣೆಬೆನ್ನೂರು, ಹುಣಸೂರು, ಹೊಸಕೋಟೆ, ಕೆ.ಆರ್.ಪುರಂನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ಇನ್ನೂ ನಾಲ್ವರು ಮಂತ್ರಿಯಾಗಲಿದ್ದಾರೆ.ಎಂಟಿಬಿ, ವಿಶ್ವನಾಥ್, ಬೈರತಿ ಬಸವರಾಜು, ಶಂಕರ್ ಮಂತ್ರಿಯಾಗುತ್ತಾರೆ ಎಂಬ ಭಿತ್ತಿಪತ್ರವನ್ನು ಹಂಚುವ ಮೂಲಕ ಬಿಜೆಪಿ ಮುಖಂಡರು ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ.

ಈ ಮೂಲಕ ಸಿದ್ದರಾಮಯ್ಯ ನವರಿಗೆ ಸಮುದಾಯದ ಅಸ್ತ್ರ ಪ್ರಯೋಗಿಸಿ ಅವರನ್ನು ಕಟ್ಟಿಹಾಕುವ ಯತ್ನ ಮಾಡಲಾಗುತ್ತಿದೆ. ಹಾಗಾದರೆ ಬಿಜೆಪಿಯ ಜಾತಿ ಅಸ್ತ್ರದಿಂದ ಸಿದ್ದರಾಮಯ್ಯನವರ ತಂತ್ರಗಾರಿಕೆಗೆ ಬ್ರೇಕ್ ಹಾಕಲು ಸಾಧ್ಯವೇ? ಅಥವಾ ಕುರುಬ ಸಮುದಾಯದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಅಸ್ತ್ರ ಫಲಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Facebook Comments