ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕುರುಕ್ಷೇತ್ರ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.23- ಪ್ರತಿಭಾ ಕಲಾನಿಕೇತನ ಸಂಸ್ಥೆಯ 44ನೇ ವಾರ್ಷಿಕೋತ್ಸವದ ಕನ್ನಡ ಪೌರಾಣಿಕ ನಾಟಕೋತ್ಸವ-2019 ಅಂಗವಾಗಿ ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಾಮಾಕ್ಷಿಪಾಳ್ಯದ ಶ್ರೀ ಮಾರುತಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಕುರುಕ್ಷೇತ್ರ ನಾಟಕ ನಡೆಯಲಿದೆ.

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಕಲ್ಲೂರು ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ ನಾಳೆ ಬೆಳಗ್ಗೆ 11 ಗಂಟೆಗೆ ಪ್ರದರ್ಶನಗೊಳ್ಳಲಿದೆ.  ರಾವುತನಹಳ್ಳಿಯ ಆನಂದಚಾರ್ ಅವರ ಸ್ವರ್ಣಗೌರಿ ಸೀನರಿ ಅವರ ಚಲನಚಿತ್ರ ಮಾದರಿಯ ಉಡುಗೆ ಮತ್ತು ಮೇಕಪ್‍ನೊಂದಿಗೆ ನವನವೀನ ವಿದ್ಯುತ್ ದೀಪಗಳಿಂದ ಅಲಂಕೃತವಾದ ಭವ್ಯ ರಂಗಸಜ್ಜಿಕೆಯಲ್ಲಿ ಉದಯ್ ಸೋಲಾರ್ ಮಾಲೀಕ ಗಂಗಣ್ಣ ಅವರು ಶ್ರೀಕೃಷ್ಣನಾಗಿ ಕಲ್ಲೂರಿನ ಪ್ರಥಮ ದರ್ಜೆ ಗುತ್ತಿಗೆದಾರ ಮುದ್ದಹನುಮೇಗೌಡ ಅವರು ದುರ್ಯೋಧನನಾಗಿ ತೆರೆ ಮೇಲೆ ರಾರಾಜಿಸಲಿದ್ದಾರೆ.

ಧರ್ಮರಾಯನಾಗಿ ವೆಂಕಟೇಶ್, ಭೀಮನಾಗಿ ಗೋಪಾಲ್, ಅರ್ಜುನನಾಗಿ ಮರಿಸ್ವಾಮಿ, ಅಭಿಮನ್ಯುವಾಗಿ ಉಮಾಶಂಕರ್, ದುಶ್ಯಾಸನನಾಗಿ ಮೂರ್ತಿ, ಕರ್ಣನಾಗಿ ರಂಗನಾಥ್, ಶಕುನಿಯಾಗಿ ಕೆ.ಎಲ್.ನಾಗರಾಜ್, ವಿದುರನಾಗಿ ಇಂದರೇಶ್ ಅವರು ಕಾಣಿಸಿಕೊಳ್ಳಲಿದ್ದಾರೆ.

ಸಾಗರ ಅವರ ತಬಲ, ಮುನಿರಾಜು ಅವರ ಕ್ಯಾಸಿಯೋ ಹಾಗೂ ಲೋಕೇಶ್‍ಕುಮಾರ್ ಕ್ಲಾರೋನೆಟ್ ವಾದ್ಯಗೋಷ್ಠಿ ಇರಲಿದೆ. ಕುಂತಿ ಮತ್ತು ಗಾಂಧಾರಿಯಾಗಿ ಪ್ರತಿಭಾ ನಾರಾಯಣ್, ದ್ರೌಪದಿ ಮತ್ತು ಸುಭದ್ರೆಯಾಗಿ ಶ್ರೀದೇವಿ, ರುಕ್ಮಿಣಿ ಮತ್ತು ಉತ್ತರೆಯಾಗಿ ವಿಜಯಕುಮಾರಿ ಹಾಗೂ ನೃತ್ಯಗಾರ್ತಿಯಾಗಿ ಕವಿತಾ ಮಿಂಚಲಿದ್ದಾರೆ.

ನಾಟಕೋತ್ಸವದ ಸಂದರ್ಭದಲ್ಲಿ ರಂಗಭೂಮಿ ನಿರ್ದೇಶಕರಾದ ಕೃಷ್ಣರಾಜು, ಕಲ್ಲೂರು ಶ್ರೀನಿವಾಸ್ ಹಾಗೂ ನರಸಿಂಹಮೂರ್ತಿ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಕಲಾಭಿಮಾನಿಗಳು ರವೀಂದ್ರಕಲಾಕ್ಷೇತ್ರಕ್ಕೆ ಆಗಮಿಸಿ ನಾಟಕ ವೀಕ್ಷಿಸಿ ಕಲಾವಿದರನ್ನು ಪೆÇ್ರೀತ್ಸಾಹಿಸಬೇಕೆಂದು ನಾಟಕ ಮಂಡಳಿ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

Facebook Comments

Sri Raghav

Admin