‘ಕುರುಕ್ಷೇತ್ರ’ ನಾಟಕ ನೋಡೋ ಆಸೆ ಇದೆಯಾ..? ಹಾಗಾದ್ರೆ ನಾಳೆ ಸುಂಕದಕಟ್ಟೆಗೆ ಬನ್ನಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 11- ವೀರಾಂಜನೇಯ ಸ್ವಾಮಿ ಕೃಪಾ ಫೋಷಿತ ನಾಟಕ ಮಂಡಳಿ ನಾಳೆ ಮಧ್ಯಾಹ್ನ ಸುಂಕದಕಟ್ಟೆಯ ಪೈಪ್‍ಲೈನ್ ರಸ್ತೆಯಲ್ಲಿರುವ ವಿನಾಯಕ ಸ್ಕೂಲ್ ಆವರಣದಲ್ಲಿ ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಹಮ್ಮಿಕೊಂಡಿದೆ.

ರಾಮನಗರದ ಕೃಷ್ಣರಾಜು ನಿರ್ದೇಶನದಲ್ಲಿ ತುಮಕೂರು ಜಿಲ್ಲೆ ಕೊಡಿಗೆಹಳ್ಳಿಯ ಲಕ್ಷ್ಮಿನರಸಿಂಹ ಸ್ವಾಮಿ ಡ್ರಾಮ ಸೀನರಿಯವರ ಮಾದರಿ ರಂಗಸಜ್ಜಿಕೆಯಲ್ಲಿ ನಾಳೆ ಮಧ್ಯಾಹ್ನ 12.30ಕ್ಕೆ ಕುರುಕ್ಷೇತ್ರ ನಾಟಕ ಪ್ರದರ್ಶನಗೊಳ್ಳುತ್ತಿದೆ.

ಉದಯ ಸೋಲಾರ್‍ನ ಗಂಗಯ್ಯ ಅವರು ಶ್ರೀಕೃಷ್ಣನಾಗಿ, ದುರ್ಯೋ ಧನನಾಗಿ ಮುದ್ದ ಹನುಮೇಗೌಡ, ಧರ್ಮರಾಯ ನಾಗಿ ಸುರೇಶ್, ಭೀಮನಾಗಿ ಮರಿಸ್ವಾಮಿ, ಮಧ್ಯಮ ಪಾಂಡವ ಅರ್ಜುನನಾಗಿ ಮೂರ್ತಿ, ಕರ್ಣನಾಗಿ ರಂಗನಾಥ್, ವೀರ ಅಭಿ ಮನ್ಯುವಾಗಿ ಬಿ.ಎಲ್.ಶಿವರಾಜ್ ಅವರು ಅಭಿನಯಿ ಸುತ್ತಿದ್ದರೆ, ಶಕುನಿ ಪಾತ್ರಧಾರಿಯಾಗಿ ನಾಗರಾಜ್ ಕಾಣಿಸಿಕೊಳ್ಳುತ್ತಿದ್ದಾರೆ.

ರುಕ್ಮಣಿ, ಉತ್ತರೆಯಾಗಿ ಚೈತ್ರ ಅವರು, ದೌಪದಿ, ಕುಂತಿ, ಗಾಂಧಾರಿ ಪಾತ್ರಧಾರಿಯಾಗಿ ತಾರಾ ಅವರು ಅಭಿನಯಿಸುತ್ತಿದ್ದಾರೆ. ಪದ್ಮರಾಜು ಅವರ ಕ್ಯಾಸಿಯೋ, ಗುಂಡಣ್ಣ ಅವರ ತಬಲ ಮತ್ತು ಕುಮಾರ್ ಅವರ ಕ್ಯಾರೋನೆಟ್ ಕುರುಕ್ಷೇತ್ರ ನಾಟಕದ ಹೈಲೈಟ್ಸ್ ಆಗಲಿದೆ.

ಶಾಸಕ ಆರ್.ಮಂಜುನಾಥ್, ಬಿಬಿಎಂಪಿ ಸದಸ್ಯರಾದ ಭಾಗ್ಯಮ್ಮ ಕೃಷ್ಣಯ್ಯ, ಹೆಗ್ಗನಹಳ್ಳಿಯ ಜೆಡಿಎಸ್ ಮುಖಂಡರಾದ ಆರ್.ಕುಮಾರ್, ಎಚ್.ಆರ್.ಪ್ರಕಾಶ್, ಕಾಂಗ್ರೆಸ್ ಮುಖಂಡ ರಮೇಶ್‍ಗೌಡ, ಬಿಜೆಪಿ ಮುಖಂಡ ಆನಂದ್ ಸ್ಥಳೀಯ ಮುಖಂಡ ಕೆ.ಎಸ್. ಗಂಗರಾಜು ಮತ್ತಿತರ ಗಣ್ಯರ ನೇತೃತ್ವದಲ್ಲಿ ಕುರುಕ್ಷೇತ್ರ ನಾಟಕ ಹಮ್ಮಿಕೊಳ್ಳಲಾಗಿದೆ.

ಸುಂಕದಕಟ್ಟೆ ಸುತ್ತಮುತ್ತಲಿನ ಕಲಾಭಿಮಾನಿಗಳು ಸಕಾಲಕ್ಕೆ ಆಗಮಿಸಿ ನಾಟಕವನ್ನು ಯಶಸ್ವಿ ಗೊಳಿಸಬೇಕು ಎಂದು ನಾಟಕ ಮಂಡಳಿಯ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

Facebook Comments