ಲಂಕಾ ಕ್ರಿಕೆಟಿಗ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲಂಬೊ,ಜು.6- ಲಂಕಾದ ಖ್ಯಾತ ಕ್ರಿಕೆಟಿಗ ಕುಸಾಲ್ ಮೆಂಡಿಸ್ ಚಲಿಸುತ್ತಿದ್ದ ಕಾರು ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿರುವುದರಿಂದ ಮೆಂಡಿಸ್‍ನನ್ನು ಪನದುರಾಪೊಲೀಸರು ಬಂಧಿಸಿದ್ದಾರೆ.

ಕಾರು ಡಿಕ್ಕಿ ಹೊಡೆದ ನಂತರ ವೃದ್ಧನನ್ನು ಕುಶಾಲ್ ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಿದರಾದರೂ ಚಿಕಿತ್ಸೆ ಫಲಿಸದೆ ವೃದ್ಧ (64) ಮೃತಪಟ್ಟಿದ್ದರಿಂದ ಮೆಂಡಿಸ್‍ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ಜಲಿಯ ಸೇನರತ್ನೆ ಖಚಿತಪಡಿಸಿದ್ದಾರೆ. ಕುಸಾಲ್ ಮೆಂಡಿಸ್‍ನನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ ಎಂದು ಜಲಿಯ ಸೇನರತ್ನೆ ತಿಳಿಸಿದ್ದಾರೆ.

ಶ್ರೀಲಂಕಾ ತಂಡದ ವಿಕೆಟ್ ಕೀಪರ್ ಆಗಿರುವ ಕುಶಾಲ್ ಮೆಂಡಿಸ್ 26 ಟ್ವೆಂಟಿ-20 ಪಂದ್ಯಗಳಿಂದ 5 ಅರ್ಧಶತಕಗಳೊಂದಿಗೆ 484 ರನ್, 44 ಟೆಸ್ಟ್ ಪಂದ್ಯಗಳಿಂದ 2995 ರನ್(7 ಶತಕ, 11 ಅರ್ಧಶತಕ), 76 ಏಕದಿನ ಪಂದ್ಯಗಳಿಂದ 2167 (2 ಶತಕ, 17 ಅರ್ಧಶತಕ)ರನ್‍ಗಳನ್ನು ಕಲೆಹಾಕಿದ್ದಾರೆ.

Facebook Comments