ಭಾರತ-ಚೀನಾ ಸಂಬಂಧ ಸುಧಾರಣೆಗೆ ರಕ್ಷಣಾ ಸಚಿವರ ಮಹತ್ವದ ಸಮಾಲೋಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಮಾಸ್ಕೋ, ಸೆ.5-ಹದಗೆಡುತ್ತಿರುವ ಭಾರತ-ಚೀನಾ ಬಾಂಧವ್ಯ ಸುಧಾರಣೆಗಾಗಿ ಉಭಯ ದೇಶಗಳ ರಕ್ಷಣಾ ಸಚಿವರುಗಳಾದ ರಾಜನಾಥ್ ಸಿಂಗ್ ಮತ್ತು ವೀ ಫೆಂಘಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‍ಸಿಒ) ಸಭೆ ನಂತರ ಉಭಯ ದೇಶಗಳ ರಕ್ಷಣಾ ಸಚಿವರು ಕಳೆದ ರಾತ್ರಿ 2 ಗಂಟೆ 20 ನಿಮಿಷಗಳ ಕಾಲ ಸುದೀರ್ಘ ಸಮಾಲೋಚನೆ ನಡೆಸಿದರು.

ಪೂರ್ವ ಲಡಾಕ್‍ನ ಇಂಡೋ-ಚೀನಾ ಗಡಿ ಭಾಗದಲ್ಲಿ ಪ್ರಕ್ಷುಬ್ಧ ಸ್ಥಿತಿ, ಉಭಯ ದೇಶಗಳ ಸೇನೆ ಜಮಾವಣೆ, ಯುದ್ಧದ ಕಾರ್ಮೋಡ, ಸಂಘರ್ಷ ವಾತಾವರಣ-ಇವುಗಳ ನಡುವೆಯೇ ಮಾಸ್ಕೋದಲ್ಲಿ ರಾಜನಾಥ್ ಸಿಂಗ್ ಮತ್ತು ಜನರಲ್ ವೀ ಫೆಂಘೆ ಅವರು ನಡುವೆ ನಡೆದ ಮಾತುಕತೆ ಭಾರೀ ಮಹತ್ವ ಪಡೆದುಕೊಂಡಿದೆ.

ಏಷ್ಯಾದ ಎರಡು ಪ್ರಬಲ ರಾಷ್ಟ್ರಗಳ ನಡುವಣ ಸಂಬಂಧ ಸುಧಾರಣೆ ಮತ್ತು ಮೈತ್ರಿಯನ್ನು ಸರಿದಾರಿಗೆ ತರುವ ಅಗತ್ಯತೆಯನ್ನು ಉಭಯ ನಾಯಕರು ಪ್ರಮುಖವಾಗಿ ಪ್ರಸ್ತಾಪಿಸಿದರು.

ಭಾರತ ಮತ್ತು ಚೀನಾ ನಡುವೆ ಈ ಹಿಂದೆ ಏರ್ಪಟ್ಟಿರುವ ಒಪ್ಪಂದದಂತೆ ಗಡಿಯಿಂದ ತನ್ನ ಸೇನೆಯನ್ನು ಚೀನಾ ಸಂಪೂರ್ಣವಾಗಿ ಹಿಂದಕ್ಕೆ ತೆಗೆದುಕೊಂಡು ಶಾಂತಿ ಮತ್ತು ಸೌಹಾರ್ದತೆಗೆ ಬದ್ಧವಾಗಿರಬೇಕೆಂದು ಭಾರತ ಸಭೆಯಲ್ಲಿ ಆಗ್ರಹಿಸಿದೆ ಎಂದು ರಕ್ಷಣಾ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.

Facebook Comments