ಲಡಾಕ್‍ನ ಕುಗ್ರಾಮಕ್ಕೆ ಮೊದಲ ನಳ ನೀರಿನ ಸಂಪರ್ಕ

ಈ ಸುದ್ದಿಯನ್ನು ಶೇರ್ ಮಾಡಿ

ಲೇಹ್, ಅ.28- ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ ಮಾಡುತ್ತಿರುವ ಭಾರತ, ಗಡಿ ಭಾಗದ ಲಡಾಕ್‍ನ ಕುಗ್ರಾಮಕ್ಕೆ ನೀರು ಪೂರೈಕೆಯ ನಲ್ಲಿ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನದ ಗಡಿ ಅಂಚಿನಲ್ಲಿರುವ ಲಡಾಕ್‍ನ ಮನ್-ಮೆರ್ಗ್ ಗ್ರಾಮಕ್ಕೆ ಮೊದಲ ನಳ ಸಂಪರ್ಕ ಕಲ್ಪಿಸಲಾಗಿದೆ.

2020ರ ಸೆಪ್ಟಂಬರ್‍ನಿಂದಲೂ ಲಡಾಕ್‍ನಲ್ಲಿ ರಾಷ್ಟ್ರೀಯ ಜಲಜೀವನ್ ಮಿಷನ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸುಮಾರು 326 ಕೋಟಿ ರೂಪಾಯಿ ವೆಚ್ಚದಲ್ಲಿ 2020ರ ಡಿಸೆಂಬರ್ ವೇಳೆಗೆ 125 ಹಳ್ಳಿಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಕಲ್ಪಿಸುವ ಗುರಿಯನ್ನು ಯೋಜನೆ ಹೊಂದಿದೆ.

ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರ ಹವಮಾನ ವೈಪರಿತ್ಯ ಹಾಗೂ ಒರಡು ಭೂ ಪ್ರದೇಶ ಹೊಂದಿದೆ. ಚಳಿಗಾಲದಲ್ಲಿ ನೀರು ಶೀಥಲಾವಸ್ಥೆಗೆ ತಲುಪುತ್ತದೆ. ಹೀಗಾಗಿ ನೀರು ಪೊರೈಕೆ ಹಲವಾರು ಸವಾಲುಗಳನ್ನು ಹೊಂದಿದೆ. ಭೌಗೋಳಿಕ ಸವಾಲುಗಳನ್ನು ಅಧ್ಯಯನ ನಡೆಸಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ನೀರು ಶೀಥಲಗೊಳ್ಳದಂತೆ ಇನ್ಫಿಲಟ್ರೇಷನ್ ಗ್ಯಾಲರಿ ತಂತ್ರಜ್ಞಾನವನ್ನು ಅನುಸರಿಸಲಾಗಿದೆ ಎಂದು ಜಲ ಜೀವನ್ ಮಿಷನ್‍ನ ಅಧಿಕಾರಿಗಳು ತಿಳಿಸಿದ್ದಾರೆ.

ಅಂತರ್ ಜಲ, ನದಿ ಸೇರಿದಂತೆ ಲಭ್ಯ ಇರುವ ನೀರಿನ ಮೂಲಗಳನ್ನು ಬಳಸಿಕೊಂಡು ವರ್ಷ ಪೂರ್ತಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Facebook Comments