ಎಲ್ಲ ವಿಷಯದಲ್ಲಿ ಫಸ್ಟ್ ಆದರೆ, ಈ ವಿಚಾರದಲ್ಲಿ ಮಾತ್ರ ಲೇಡಿಸ್ ಯಾವಾಗಲೂ ಲಾಸ್ಟ್…!

ಈ ಸುದ್ದಿಯನ್ನು ಶೇರ್ ಮಾಡಿ

Women--01

ಸಮೀಕ್ಷೆಯೊಂದರಲ್ಲಿ ಶೇ.70ರಷ್ಟು ಮಹಿಳೆಯರು ರಿಲೇಷನ್‌ಶಿಪ್ ವಿಚಾರದಲ್ಲಿ ಆಸಕ್ತಿ ತೋರಲ್ಲ ಎಂಬುದು ಗೊತ್ತಾಗಿದೆ. ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರೆ “ವೆಯಿಟ್ ಅಂಡ್ ವಾಚ್” ಪಾಲಸಿ ಎಂದು ತಜ್ಞರು ಹೇಳುತ್ತಿದ್ದಾರೆ. ರಿಲೇಷನ್‍ಶಿಪ್ಪನ್ನು ಬೆಳೆಸಿಕೊಳ್ಳುವಲ್ಲಿ ಶೇ.90ರಷ್ಟು ಪುರುಷರೇ ಮುಂದಿರುತ್ತಾರೆ. ಇದು ನಿಜವೇನಾ ಎಂದು ಮಹಿಳೆಯರನ್ನು ಪಶ್ನಿಸಿದರೆ ಶೇ.19ರಷ್ಟು ಮಹಿಳೆಯರು ಹೌದೆಂದಿದ್ದಾರೆ. ಶೇ.11ರಷ್ಟು ಮಂದಿ ಮಹಿಳೆಯರು ’ಆಗಿರಬಹುದು’ ಎಂದು ಉತ್ತರ ನೀಡಿದ್ದಾರೆ. ಶೇ.70ರಷ್ಟು ಮಂದಿ ಮಹಿಳೆಯರು ಮಾತ್ರ ತಾವು ಎಂತಹ ಪರಿಸ್ಥಿತಿಯಲ್ಲೂ ಮೊದಲು ಪ್ರಪೋಸ್ ಮಾಡುವ ಪ್ರಸ್ತಾಪವೇ ಇಲ್ಲ ಎಂದಿದ್ದಾರೆ.

’ಸಂಸ್ಕೃತಿ ಸಂಪ್ರದಾಯಗಳಂತಹ ಅಂಶಗಳು ಇಂತಹ ವಿಷಯಗಳಲ್ಲಿ ಮಹಿಳೆಯರು ಹೆಚ್ಚು ಆಸಕ್ತಿ ತೋರದಂತೆ ಮಾಡುತ್ತಿವೆ’ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅತ್ತಲಿಂದ ’ನೋ’ ಎಂಬ ಉತ್ತರ ಬಂದರೆ ಸಹಿಸಲು ಸಾಧ್ಯವಾಗಲ್ಲ ಎಂದು ಕೆಲವು ಮಹಿಳೆಯರು ಮೊದಲು ಪ್ರಪೋಜ್ ಮಾಡುತ್ತಿಲ್ಲವಂತೆ. ಇನ್ನೂ ಕೆಲವು ಮಹಿಳೆಯರು.. ಮನಸ್ಸಿನಲ್ಲಿನ ಮಾತನ್ನು ಧೈರ್ಯವಾಗಿ ಹೇಳದೆ ಭಾವೋದ್ವೇಗಗಳನ್ನು ಹೃದಯದಲ್ಲೇ ಬಚ್ಚಿಟ್ಟುಕೊಳ್ಳುತ್ತಿದ್ದಾರಂತೆ. ಮೊದಲು ಪ್ರಪೋಸ್ ಮಾಡಿದರೆ.. ತಮ್ಮ ವ್ಯಕ್ತಿತ್ವದ ಬಗ್ಗೆ ಏನೆಂದುಕೊಳ್ಳುತ್ತಾರೋ ಎಂಬ ಭಾವನೆ ಮಹಿಳೆಯರಲ್ಲಿ ಬಲವಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

Women--01

ಇಂತಹ ಸಂಗತಿಗಳಲ್ಲಿ ಅತಿಯಾಗಿ ಪ್ರತಿಕ್ರಿಯಿಸಿದರೆ… ಈ ಹುಡುಗಿ ಕ್ಯಾರೆಕ್ಟರ್ ಸರಿಯಿಲ್ಲ ಎಂದು ಸಮಾಜ ಮುದ್ರೆ ಒತ್ತುತ್ತದೆಂಬ ಭಯ ಸಹ ಮನಸ್ಸಿನ ಮಾತು ತುಟಿ ತನಕ ಬರದಂತೆ ತಡೆಯುತ್ತಿದೆಯಂತೆ. ಇಂತಹ ಭಯಗಳೇ ಸಂಬಂಧಗಳ ವಿಚಾರದಲ್ಲಿ ಮಹಿಳೆಯರಿಗೆ ಅಡ್ಡಿಯಾಗುತ್ತಿವೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಮೇಲಾಗಿ ಪುರುಷರಿಗಿಂತ ಮೊದಲು ಮಹಿಳೆಯರು ಪ್ರತಿಪಾದಿಸಿದರೆ ಅವರನ್ನು ಗಯ್ಯಾಳಿಗಳಾಗಿ ಭಾವಿಸುತ್ತಾರೆಂದು, ಕೀಳಾಗಿ ಕಾಣುತ್ತಾರೆಂಬುದು ಕೆಲವರ ಅಭಿಪ್ರಾಯ. ಹಾಗಾಗಿ ರಿಲೇಷನ್‌ಶಿಪ್ ವಿಚಾರದಲ್ಲಿ ನಾರಿಯರು ’ವೆಯಿಟ್ ಅಂಡ್ ವಾಚ್’ ಧೋರಣೆ ಅನುಸರಿಸುತ್ತಾರೆ. ಅದೇ ಸಮಯದಲ್ಲಿ ಪುರುಷರೇ ಮುಂದೆ ಬರಬೇಕೆಂಬ ಧೋರಣೆ ಅವರದು.

Facebook Comments

Sri Raghav

Admin