ಡಾಬಾ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು 5ಲಕ್ಷ ಕದ್ದೊಯ್ದ ಕಳ್ಳರು..!

ಈ ಸುದ್ದಿಯನ್ನು ಶೇರ್ ಮಾಡಿ

Robberd-car-glass-brock
ನೆಲಮಂಗಲ,ಆ.18- ಡಾಬಾ ಬಳಿ ಹಾಡಹಗಲೇ ಸ್ಕಾರ್ಪಿಯೋ ಕಾರಿನ ಗಾಜು ಹೊಡೆದ ದರೋಡೆಕೋರ 5.20 ಲಕ್ಷ ಹಣವನ್ನು ದರೋಡೆ ಮಾಡಿರುವ
ಘಟನೆ ತ್ಯಾಮಗೊಂಡ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ತಾಲ್ಲೂಕಿನ ದಾಬಸ್‍ಪೇಟೆ ರಾಯರಪಾಳ್ಯ ಗ್ರಾಮದ ಜಯ ಕರ್ನಾಟಕ ಸಂಘಟನೆಯ ರಾಕೇಶ್ ಎಂಬುವರಿಗೆ ಸೇರಿದ ಹಣವನ್ನು ದರೋಡೆಕೋರ ಕದೊಯ್ದಿದ್ದಾನೆ.

ರಾಕೇಶ್ ನೆಲಮಂಗಲ ಪಟ್ಟಣದ ಎಸ್‍ಬಿಐ ಬ್ಯಾಂಕ್‍ನಿಂದ 5.50 ಲಕ್ಷ ರೂ. ಡ್ರಾ ಮಾಡಿದ್ದು, 30 ಸಾವಿರ ಹಣವನ್ನು ಆಳುಗಳಿಗೆ ಬಟಾವಣೆ ಮಾಡಿದ್ದಾರೆ. ಉಳಿದ 5.20 ಲಕ್ಷ ಹಣವನ್ನು ಕಾರಿನಲ್ಲಿಟ್ಟುಕೊಂಡು ಮುದ್ದಲಿಂಗನಹಳ್ಳಿ ಗ್ರಾಮ ಸಮೀಪದ ಸರೋವರ್ ಡಾಬಾದ ಬಳಿ ಬಂದು ಕಾರು ನಿಲ್ಲಿಸಿ ಊಟಕ್ಕೆ ತೆರಳಿದ್ದಾರೆ.

ಈ ವೇಳೆ ಕಾರನ್ನು ಹಿಂಬಾಲಿಸಿಕೊಂಡು ಬೈಕ್‍ನಲ್ಲಿ ಬಂದಿದ್ದ ದರೋಡೆಕೋರ ಕಾರಿನ ಗಾಜು ಒಡೆದು ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದಾನೆ. ಕೆಲ ಸಮಯದ ಬಳಿಕ ರಾಕೇಶ್ ಕಾರಿನ ಬಳಿ ಬಂದಾಗ ಹಣ ದರೋಡೆಯಾಗಿರುವುದು ಕಂಡುಬಂದಿದೆ.  ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಡಾಬಾ ಬಳಿಯ ಸುತ್ತಮುತ್ತಲಿನ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಬೈಕ್‍ನಲ್ಲಿ ಬಂದ ವ್ಯಕ್ತಿ ಕಾರಿನ ಗಾಜು ಒಡೆದು ಹಣ ದರೋಡೆ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.  ತ್ಯಾಮಗೊಂಡ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರನಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments

Sri Raghav

Admin