ಪ್ರತಿಭಟನೆಯಲ್ಲಿ ಭಾಗಿಯಾಗಲು ಲಖಬೀರ್ ಸಿಂಗ್ ಕುಟುಂಬಕ್ಕೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.16- ದೆಹಲಿಯ ಸಿಂಘುಯಲ್ಲಿ ಹತ್ಯೆಯಾಗಿರುವ ಲಖಬೀರ್ ಸಿಂಗ್ರನ್ನು ರೈತರ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸಿದ್ದು ಯಾರು ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಕುಟುಂಬದ ಸದಸ್ಯರು ಒತ್ತಾಯಿಸಿದ್ದಾರೆ.

ಒಂದು ಕೈ, ಒಂದು ಕಾಲು ಕತ್ತರಿಸಿ ದೇಹವನ್ನು ವಿರೂಪಗೊಳಿಸಿರುವ ಸ್ಥಿತಿಯಲ್ಲಿ ಲಖಬೀರ್ ಸಿಂಗ್ ಅವರ ಶವ ಶುಕ್ರವಾರ ಪತ್ತೆಯಾಗಿತ್ತು. ಆತನ ಸಹೋದರಿ ರಾಜ್ ಕೌರ್ ಪ್ರಕಾರ ಲಖಬೀರ್ ಕೂಲಿ ಕೆಲಸ ಮಾಡುತ್ತಿದ್ದ. ಮನೆಗೆ ಬರದೆ ಕೆಲಸದ ನಿಮ್ಮಿತ್ತ ಮನೆಯಿಂದ ಹೊರಗೆ ಇರುತ್ತಿದ್ದ.

ಅಕ್ಟೋಬರ್ 6ರಂದು 50 ರೂ.ಗಳನ್ನು ಪಡೆದುಕೊಂಡು ದೆಹಲಿಗೆ ಹೋಗುತ್ತಿರುವುದಾಗಿ ಹೇಳಿದ್ದ. ಗ್ರಾಮದಿಂದ 15 ಕಿಲೋ ಮೀಟರ್ ದೂರಕ್ಕೆ ಹೋದ ಬಳಿಕ ಆತ ಕುಟುಂಬದೊಂದಿಗೆ ಸಂಪರ್ಕ ಕಡಿದುಕೊಂಡಿದ್ದಾನೆ. ಶುಕ್ರವಾರ ಆತನ ಸಾವಿನ ಸುದ್ದಿ ಸಿಕ್ಕಿದೆ ಎಂದಿದ್ದಾರೆ.

ಲಖಬೀರ್ ಅವರ ಪತ್ನಿ ತಮ್ಮ ಪತಿಯ ಕೊಲೆಯ ಬಗ್ಗೆ ಆಘಾತ ವ್ಯಕ್ತ ಪಡಿಸಿದ್ದು, ಅವರನ್ನು ದೆಹಲಿಗೆ ಹೋಗಲು ಕುಮ್ಮಕ್ಕು ನೀಡಿದ್ಯಾರು ಎಂಬುದು ತನಿಖೆಯಾಗಬೇಕು. ಇನ್ನೂ ಮುಂದೆ ನಾನು ಮಕ್ಕಳನ್ನು ಹೇಗೆ ಸಾಕಲಿ ಎಂದು ಅಳಲು ತೋಡಿಕೊಂಡಿದ್ದಾರೆ. 8, 10, 12 ವರ್ಷದ ಮೂರು ಮಕ್ಕಳನ್ನು ಲಖಬೀರ್ ಸಿಂಗ್ ಅಗಲಿದ್ದಾರೆ.

ಆದರೆ ಲಖಬೀರ್ ಅವರ ಮಾವ ಬಲದೇವ್ ಸಿಂಗ್ ಹೇಳುವುದೇ ಬೇರೆಯಾಗಿದೆ. ಲಖಬೀರ್ ಡ್ರಗ್ಸ್ ವ್ಯಸನಿಯಾಗಿದ್ದ. ಐದಾರು ವರ್ಷಗಳ ಹಿಂದೆ ಪತ್ನಿ ಅವನನ್ನು ಬಿಟ್ಟು ಹೋಗಿದ್ದಳು. ಈಗ ಆತ ಸತ್ತ ಮೇಲೆ ವಾಪಾಸ್ ಬಂದಿದ್ದಾಳೆ ಎಂದಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೆÇಲೀಸರು. ಲಖಬೀರ್ ಆರು ತಿಂಗಳ ಮಗುವಾಗಿದ್ದಾಗ ಆತನ ಚಿಕ್ಕಮ್ಮ ಮತ್ತು ಚಿಕ್ಕಪ್ಪ ದತ್ತು ಪಡೆದು ಸಾಕಿದರು. ಆತನ ಸಹೋದರಿಯೂ ಚಿಕ್ಕಪ್ಪನ ಜೊತೆಯಲ್ಲೇ ವಾಸಿಸುತ್ತಿದ್ದಳು. ಕೊಲೆಯ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin