ಲಾಲ್‍ಬಾಗ್‍ನಲ್ಲಿ ವಾಕಿಂಗ್ ಹೋಗುವವರೇ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.12- ಲಾಲ್‍ಬಾಗ್ ವಾಕಿಂಗ್ ಹೋಗುತ್ತಿದ್ದವರಿಗೆ ಕೊರೊನಾ ಭೀತಿ ಆವರಿಸಿದೆ. ದಿನನಿತ್ಯ ಲಾಲ್‍ಬಾಗ್ ಹೋಗುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ ಪರಿಣಾಮ ವಾಕಿಂಗ್ ಹೋಗುತ್ತಿದ್ದವರಲ್ಲಿ ಆತಂಕ ಹೆಚ್ಚಾಗಿದೆ.

ಪ್ರತಿನಿತ್ಯ ಲಾಲ್‍ಬಾಗ್‍ಗೆ ವಾಕಿಂಗ್ ಹೋಗುತ್ತಿದ್ದ 50 ವರ್ಷದ ವ್ಯಕ್ತಿಗೆ ಟೆಸ್ಟ್ ಮಾಡಿದ ಸಂದರ್ಭದಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ತಿಳಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ವಿಧಿಸಿದ ಸಂದರ್ಭದಲ್ಲಿ ಉದ್ಯಾನವನ, ದೇವಾಲಯ, ಹೊಟೇಲ್, ಕೈಗಾರಿಕೆ ಸೇರಿದಂತೆ ಎಲ್ಲವುಗಳನ್ನೂ ಸರ್ಕಾರ ಬಂದ್ ಮಾಡಿತ್ತು. ಆರ್ಥಿಕ ಚಟುವಟಿಕೆಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಒಂದೊಂದೇ ಉದ್ಯಮವನ್ನು ತೆರವುಗೊಳಿಸಲಾಗಿತ್ತು.

ಕಳೆದ ವಾರದಿಂದ ಉದ್ಯಾನವನ್ನು ಸರ್ಕಾರ ಜನರಿಗಾಗಿ ಮುಕ್ತಗೊಳಿಸಿತ್ತು. ಪ್ರತಿಷ್ಠಿತ ಲಾಲ್‍ಬಾಗ್‍ನಲ್ಲಿ ಜನರು ಬೆಳಗ್ಗೆ ವಾಕಿಂಗ್ ಹೋಗಲು ಪ್ರಾರಂಭಿಸಿದ್ದರು.

ಪ್ರತಿದಿನ ವಾಕಿಂಗ್ ಹೋಗುತ್ತಿದ್ದ 50 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಇವರ ಜತೆ ವಾಕಿಂಗ್ ಮಾಡುತ್ತಿದ್ದವರಲ್ಲಿ ಆತಂಕ ಹೆಚ್ಚಾಗಿರುವುದಲ್ಲದೆ ಲಾಲ್‍ಬಾಗ್‍ಗೆ ವಾಕಿಂಗ್ ಹೋಗುತ್ತಿದ್ದವರಲ್ಲೂ ಕೂಡ ಭೀತಿ ಶುರುವಾಗಿದೆ.

Facebook Comments