ಗೃಹ ಮಂಡಳಿಯಿಂದ ಹೆಚ್ಚುವರಿಯಾಗಿ ಪಡೆದ ಭೂಮಿ ರೈತರಿಗೆ ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.24- ಗೃಹ ಮಂಡಳಿಯ ವಸತಿ ಯೋಜನೆಗಾಗಿ ವಶಪಡಿಸಿಕೊಳ್ಳಲಾದ ಹೆಚ್ಚುವರಿ ಭೂಮಿಯನ್ನು ರೈತರಿಗೆ ವಾಪಸ್ ನೀಡುವುದಾಗಿ ಸಚಿವ ವಿ.ಸೋಮಣ್ಣ ಹೇಳಿದರು. ವಿಧಾನ ಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರ ಪರವಾಗಿ ಅಪ್ಪಾಜಿಗೌಡ ಕೇಳಿದ ಅವರ ಪ್ರಶ್ನೆಗೆ ಮಂಡ್ಯ ಜಿಲ್ಲೆ ಕೊತ್ತತ್ತಿ ಹೋಬಳಿಯಲ್ಲಿ ಎಲೆಚಾಕನಹಳ್ಳಿ, ನೋದೆಕೊಪ್ಪಲು , ರಾಗಿಮುದ್ದನಹಳ್ಳಿ , ಊರಮಾರ ಕಸಲಗೆರೆ ಗ್ರಾಮಗಳಲ್ಲಿ ಗೃಹ ಮಂಡಳಿ ವಸತಿ ಯೋಜನೆಗಾಗಿ 800 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.

ಬೇಡಿಕೆ ಆಧರಿಸಿ ಸಮೀಕ್ಷೆ ನಡೆಸಿದಾಗ 200 ಎಕರೆ ಸಾಕು ಎಂಬ ವರದಿ ಬಂದಿದೆ. ಹೆಚ್ಚುವರಿ ಯಾಗಿರುವ 600 ಎಕರೆಯ ಸದಸ್ಯರ ಸಲಹೆಯಂತೆ ರೈತರಿಗೆ ವಾಪಸ್ ನೀಡಲಾಗುತ್ತಿದೆ. ಒಂದು ವಾರದಲ್ಲಿ ನಿರಪೇಕ್ಷಣಾ ಪತ್ರ ನೀಡಲಾಗುವುದು.

ಬೆಂಗಳೂರು ಸಮೀಪ ತಾವರೆಕೆರೆ ಬಳಿ ಸಹ ಇದೇ ರೀತಿಯ ಪ್ರಕರಣ ಆಗಿದೆ. ವಸತಿ ಯೋಜನೆಗೆ 300 ಎಕರೆ ಸ್ವಾಧೀನವಾಗಿತ್ತು. ಅದರಲ್ಲಿ ಹೆಚ್ಚುವರಿ ಭೂಮಿಯನ್ನು ರೈತರಿಗೆ ವಾಪಸ್ ನೀಡಲು ನಿರ್ಧರಿಸಲಾಗಿದೆ ಎಂದರು.

Facebook Comments