ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ, ಕಾಸಿಯಾ ಅಭಿನಂದನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.13- ಕೃಷಿಕರಲ್ಲದವರಿಗೂ ಯಾವುದೇ ಮಿತಿ ಇಲ್ಲದೆ ಕೃಷಿ ಭೂಮಿ ಖರೀದಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ರ್ನಿರಿಸಿರುವುದು ರಾಜ್ಯದಲ್ಲಿ ಕೈಗಾರೀಕರಣಕ್ಕೆ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಕಾಸಿಯಾ ಅಧ್ಯಕ್ಷ ರಾಜು.ಆರ್ ಹೇಳಿದರು.

ಈ ತಿದ್ದುಪಡಿಯಿಂದ ರಾಜ್ಯದ ಬಹತೇಕ ಉದ್ಯಮಿಗಳು ಸುಲಭವಾಗಿ ಕೃಷಿ ಭೂಮಿ ಖರೀದಿಸಬಹುದಾಗಿದೆ. ಕೈಗಾರೀಕರಣದಿಂದ ರಾಜ್ಯದ ಆದಾಯ ಹೆಚ್ಚುವುದಲ್ಲದೇ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಿ, ರೈತಾಪಿ ಬಂಧುಗಳಿಗೆ ಸಹ ಒಳ್ಳೆಯ ಬೆಲೆ ಸಿಗಲಿದೆ. ಇದರಿಂದಾಗಿ ರಾಜ್ಯಕ್ಕೆ ಬಂಡವಾಳ ಹರಿದುಬರುವುದಲ್ಲದೇ, ಕೈಗಾರಿಕೆ ಮತ್ತು ಕೃಷಿ ಪ್ರಮಾಣವೂ ಹೆಚ್ಚಾಗಲಿದ್ದು, ರಾಜ್ಯವು ಅಭಿವೃದ್ಧಿಯತ್ತ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ದೇಶದ ಬಹುತೇಕ ರಾಜ್ಯಗಳಲ್ಲಿ ಕೃಷಿಯೇತರರು ಕೃಷಿ ಭೂಮಿಗಳನ್ನು ಖರೀದಿಸಲು ಅವಕಾಶ ನೀಡಿರುವುದರಿಂದ ರಾಜ್ಯದ ಬಹಳಷ್ಟು ಉದ್ದಿಮೆದಾರರು ಅಕ್ಕ ಪಕ್ಕದ ರಾಜ್ಯಗಳಲ್ಲಿ ಭೂಮಿ ಖರೀದಿಸುತ್ತಿದ್ದರು. ಈಗ ಆ ಚಿತ್ರಣ ಬದಲಾಗಿ ರಾಜ್ಯದಲ್ಲಿ ಬಂಡವಾಳ ಹೂಡಲು ಅನೇಕ ಉದ್ಯಗಸ್ಥರು ಮತ್ತು ಉದ್ದಿಮೆದಾರರು ಮುಂದೆ ಬರಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸ್ವತ್ತುಗಳಿಗೆ ಸ್ಥಳೀಯ ಪಂಚಾಯತಿಗಳಿಂದ ಇ-ಖಾತಾ ಗಳನ್ನು ನೀಡಲಾಗುತ್ತಿದೆ.

ನಿಯಮಗಳನ್ವಯ ಪರಿರ್ತಯಾಗಿರುವ ಜಮೀನುಗಳಲ್ಲಿ ಪಂಚಾಯತಿ ವತಿಯಿಂದ ಕಟ್ಟಡದ ನಕ್ಷೆ ಅನುಮೋದನೆ ಪಡೆದು ನರ್ಮಿಸಿರುವ ಕಟ್ಟಡಗಳಿಗೆ, ಬಿಎಂಆರ್‍ಡಿಎ ಇಂದ ಕಟ್ಟಡ ನಕ್ಷೆ ಅನುಮೋದನೆ ಪಡೆದಿರುವುದಿಲ್ಲ ಎಂದು 11-ಬಿ ಇ-ಖಾತಾ, ಅಂದರೆ ಕ್ರಮಬದ್ಧವಲ್ಲದ ಸ್ವತ್ತು ಎಂದು ಖಾತಾ ನೀಡಲಾಗುತ್ತಿದೆ.

ಇದರಿಂದಾಗಿ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ಇಂತಹ ಸ್ವತ್ತುಗಳ ಮೇಲೆ ಸಾಲ ಸೌಲಭ್ಯಗಳನ್ನು ನೀಡಲು ನಿರಾಕರಿಸುತ್ತಿದ್ದು, ಸಾವಿರಾರು ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೀಡಾಗಿವೆ. ಹಾಗೂ ಈಗಾಗಲೇ ಸಾಲಸೌಲಭ್ಯಗಳನ್ನು ನೀಡಿರುವ ಹಣಕಾಸು ಸಂಸ್ಥೆಗಳು ಬದಲಿ ಸ್ವತ್ತುಗಳನ್ನು ಜಾಮೀನು ನೀಡಲು ಒತ್ತಾಯಿಸುತ್ತಿವೆ. ಈ ಸಮಸ್ಯೆಯನ್ನು ಪರಿಹರಿಸುವ ಈ ನಿಟ್ಟಿನಲ್ಲಿ ಹಾಲಿ ಪರಿರ್ತಿತ ಜಮೀನುಗಳಲ್ಲಿರುವ ಎಲ್ಲಾ ಸ್ವತ್ತುಗಳಿಗೆ 11-ಎ ಖಾತಾ ನೀಡುವ ಕುರಿತು ಸೂಕ್ತ ನಿರ್ದೇಶನ ನೀಡಲು ಕೋರಿದ್ದಾರೆ.

Facebook Comments