ತೀವ್ರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಪಾಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.26-ರೈತರಿಂದ ತೀವ್ರ ವಿರೋಧಕ್ಕೆ ಒಳಗಾಗಿದ್ದ 2020ನೇ ಸಾಲಿನ ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ವಿಧೇಯಕವೂ ಕೆಲವು ತಿದ್ದುಪಡಿಯೊಂದಿಗೆ ಕಾಂಗ್ರೆಸ್ ಸಭಾತ್ಯಾಗ ನಡೆವೆ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.

ಶಾಸನ ರಚನಾ ಕಲಾಪದಲ್ಲಿ ಪ್ರತಿಪಕ್ಷಗಳು ಸೇರಿದಂತೆ ಕಾಯ್ದೆ ಸುದೀರ್ಘ ಚರ್ಚೆಯ ನಂತರ ಕಂದಾಯ ಸಚಿವ ಆರ್. ಅಶೋಕ್ ಅವರು, ರೈತರ ಸಂಘದ ಅಧ್ಯಕ್ಷರಾಗಿ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅವರು ಸೇರಿದಂತೆ ಹಲವು ಶಾಸಕರು ಈ ಕಾಯ್ದೆಯ 79 ಎ ಮತ್ತು 79ಬಿ ವಿನಾಯಿತಿ ನೀಡುವ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದರು. 2014ರಲ್ಲೇ ತಿದ್ದುಪಡಿ ನಿರ್ಧಾರವಾಗಿತ್ತು.

ಪ್ರತಿ ನಾಗರಿಕರಿಗೂ ತನ್ನ ಉದ್ಯೋಗ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಹೊಸದಾಗಿ ಯುವಕರು ಕೃಷಿ ಬರಬೇಕು ಎಂಬ ಉದ್ದೇಶದಿಂದ 79ಎ ಮತ್ತು 79ಬಿ ತಿದ್ದುಪಡಿ ತರಲಾಗಿದೆ. ಯುನಿಟ್ ಪ್ರಮಾಣವನ್ನು ಹಳೆಯದನ್ನೇ ಮುಂದುವರಿಸಿ ಕಡಿಮೆ ಮಾಡಲಾಗಿದೆ. ರೈತರಿಗೆ ಅನುಕೂಲವಾಗಲಿದೆ.

ನೀರಾವರಿ ಭೂಮಿಯನ್ನು ಕೃಷಿ ಬಳಸಬೇಕು. ಪರಿಶಿಷ್ಟಜಾತಿ ಮತ್ತು ಪಂಗಡ ಭೂಮಿ ಮುಟ್ಟಲು ಅವಕಾಶವಿಲ್ಲ ಎಂದು ಹೇಳಿ ತಿದ್ದುಪಡಿಯೊಂದಿಗೆ ವಿಧೇಯಕಕ್ಕೆ ಒಪ್ಪಿಗೆ ನೀಡಬೇಕು ಎಂದು ಕೋರಿದರು.

ಆಗ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಅವರು, ಕಾಯ್ದೆಯ 109 ಸೆಕ್ಷನ್ ಪ್ರಕಾರ ಕೈಗಾರಿಕೆ ಉದ್ದೇಶಕ್ಕೆ ನೀಡಲಾದ ಭೂಮಿ ಬಳಕೆಯಾಗದಿದ್ದರೆ ವಾಪಸ್ಸು ಪಡೆಯುವನ್ನು ಮುಂದುವರೆಸಬೇಕು ಎಂದು ಸಲಹೆ ಮಾಡಿದರು.

ಆಗ ಸಭಾಧ್ಯಕ್ಷರು ಕುಮಾರಸ್ವಾಮಿ ಅವರು ಮಾಡಿದ ಸಲಹೆ ಪರಿಶೀಲಿಸಿ ಎಂದು ಸಚಿವರಿಗೆ ಸೂಚಿಸಿದರು. ಈ ನಡುವೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾಂಗ್ರೆಸ್ ಸಭಾತ್ಯಾಗ ಮಾಡಿತು. ಬಳಿಕ ಸಭಾಧ್ಯಕ್ಷರು ಮತಕ್ಕೆ ಹಾಕಿದಾಗ ಧ್ವನಿ ಮತದ ಅನುಮೋದನೆ ದೊರೆಯಿತು.

Facebook Comments

Sri Raghav

Admin