ಚಂದಿರನ ಅಂಗಳಕ್ಕೆ ಕಾಲಿಟ್ಟ ಚೀನಾದ ಮಾನವ ರಹಿತ ನೌಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಡಿ.4- ಚಂದಿರನ ಅಂಗಳಕ್ಕೆ ಕಾಲಿಟ್ಟಿರುವ ಚೀನಾದ ಮಾನವ ರಹಿತ ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈ ಪದರಗಳ ಮಾದರಿಯನ್ನು ಸಂಗ್ರಹಿಸಿ ಮತ್ತೆ ಭೂಮಿಯತ್ತ ಪ್ರಯಾಣ ಬೆಳೆಸಿದೆ ಎಂದು ಚೀನಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

ಚಂದ್ರನ ಕುರಿತಂತೆ ಸಂಶೋಧನೆ ಆರಂಭಿಸಿರುವ ಚೀನಾ ಕಳೆದ ನ.24ರಂದು ಚಂದಿರನ ಅಂಗಳದ ಮಾದರಿ ಸಂಗ್ರಹಿಸಿ ವಾಪಸಾಗುವಂತಹ ಚೇಂಜ್-5 ಬಾಹ್ಯಾಕಾಶ ನೌಕೆಯನ್ನು ಉಡಾಯಿಸಿತ್ತು.

ನಿಗದಿಯಂತೆ ಚಂದಿರನ ಅಂಗಳದ ಮೇಲೆ ಕಾಲಿಟ್ಟಿರುವ ಚೇಂಜ್-5 ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈ ಪದರಗಳ ಮಾದರಿಯನ್ನು ಸಂಗ್ರಹಿಸಿ ಅದನ್ನು ಸದಾ ಸೀಲ್ ಮಾಡಿ ಮತ್ತೆ ಭೂಮಿಯತ್ತ ಪಯಣ ಬೆಳೆಸಿದೆ ಎಂದು ತಿಳಿದು ಬಂದಿದೆ.

ಮಾನವ ರಹಿತ ಬಾಹ್ಯಾಕಾಶ ನೌಕೆಯೊಂದು ಚಂದಿರನ ಅಂಗಳಕ್ಕೆ ತೆರಳಿ ಅಲ್ಲಿನ ಮಾದರಿಗಳನ್ನು ಭೂಮಿಗೆ ತರುತ್ತಿರುವುದು ವಿಶ್ವ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ.

Facebook Comments