ಭೂಕುಸಿತ : 13 ಗಣಿ ಕಾರ್ಮಿಕರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಜಕಾರ್ತ, ಅ.22-ಇಂಡೋನೆಷ್ಯಾದ ಸುಮಾತ್ರ ದ್ವೀಪದಲ್ಲಿ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ 13 ಗಣಿ ಕಾರ್ಮಿಕರು ಭೂ ಸಮಾಧಿಯಾಗಿದ್ದಾರೆ. ಈ ದುರ್ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಕೆಲವರು ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.  ದಕ್ಷಿಣ ಸುಮಾತ್ರ ಪ್ರಾಂತ್ಯದ ಮËರಾ ಎನಿಮ್ ಜಿಲ್ಲೆಯ ಟಾನ್‍ಜಂಗ್ ಲಾಲಾಂಗ್ ಗ್ರಾಮದ ಗಣಿಯಲ್ಲಿ ಈ ದುರಂತ ಸಂಭವಿಸಿದೆ.

ಭೂಮಿಯಿಂದ 65 ಅಡಿಗಳಷ್ಟು ಆಳದ ಸುರಂಗದಲ್ಲಿ ಗಣಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಭೂಕುಸಿತವಾಗಿ 13 ಮಂದಿ ಮೃತಪಟ್ಟರು. ಇನ್ನೂ ಕೆಲವರು ಮಣ್ಣಿನ ಆವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.  ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.

Facebook Comments