ವಿಯೆಟ್ನಾಂನಲ್ಲಿ ಭೂಕುಸಿತದಿಂದ 45 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಹನೋಯ್, ಅ.18- ಮಧ್ಯ ವಿಯೆಟ್ನಾಂನಲ್ಲಿ ಭಾರೀ ಮಳೆಯಿಂದಾಗಿ ಐದು ದಿನಗಳ ಅಂತರದಲ್ಲಿ ಸಂಭವಿಸಿದ ಎರಡು ಭೂ ಕುಸಿತ ದುರಂತಗಳಲ್ಲಿ ಯೋಧರು ಸೇರಿದಂತೆ 45ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಈ ದುರ್ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು , ಕೆಲವರು ನಾಪತ್ತೆಯಾಗಿದ್ದಾರೆ. ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ವಾಂಗ್ ಟ್ರೀ ಪ್ರಾಂತ್ಯದಲ್ಲಿ ನಿನ್ನೆ ರಾತ್ರಿ ಇಡೀ ಸುರಿದ ಭಾರೀ ಮಳೆಯಿಂದಾಗಿ ಗುಡ್ಡವೊಂದು ಕುಸಿದು ಸೇನಾ ಶಿಬಿರದ ಮೇಲೆ ಉರುಳಿ ಬಿದ್ದ ಪರಿಣಾಮ 22ಕ್ಕೂ ಹೆಚ್ಚು ಮಂದಿ ಭೂ ಸಮಾಧಿಯಾಗಿದ್ದಾರೆ.

ಈ ದುರ್ಘಟನೆಯಲ್ಲಿ ಕೆಲ ಯೋಧರು ನಾಪತ್ತೆಯಾಗಿದ್ದು , ಶೋಧ ಕಾರ್ಯ ಮುಂದುವರೆದಿದೆ. ಆದರೆ 8 ಸೈನಿಕರು ಆಶ್ಚರ್ಯಕರ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾರೆ. ಫಿಂಗ್ ಟ್ರೀ ಪ್ರಾಂತ್ಯದ ಪಕ್ಕದಲ್ಲೇ ಇರುವ ತುವ್ ತಿನಾ ವುಹಾ ಪ್ರಾಂತ್ಯದಲ್ಲಿ ಬುಧವಾರ ರಾತ್ರಿ ಭೂ ಕುಸಿತವಾಗಿ ಯೋಧರು ಸೇರಿದಂತೆ 13 ಮಂದಿ ಮೃತಪಟ್ಟಿದ್ದರು.

ಈವರೆಗೆ 13ಜನರ ಶವಗಳನ್ನು ಹೊರ ತೆಗೆಯಲಾಗಿದ್ದು , ಮಣ್ಣಿನ ಭಗ್ನಾವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Facebook Comments