16 ರಾಜ್ಯಗಳಲ್ಲಿ ವರುಣಾಸುರನ ಆರ್ಭಟಕ್ಕೆ 900ಕ್ಕೂ ಹೆಚ್ಚು ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.9-ದೇಶದ ಹಲವೆಡೆ ಮುಂಗಾರು ಋತು ಉಗ್ರ ಸ್ವರೂಪ ಪಡೆದು ಕೊಂಡಿದ್ದು, 16 ಜಿಲ್ಲೆಗಳಲ್ಲಿ ಭಾರೀ ಮಳೆ, ಪ್ರವಾಹ, ಗುಡ್ಡ ಕುಸಿತ-ಭೂಕುಸಿತಗಳಿಂದ ಈವರೆಗೆ 900ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ತೀವ್ರ ಗಾಯಗೊಂಡಿದ್ದಾರೆ.

ಮಳೆ ಮತ್ತು ನೆರೆ ಹಾವಳಿಯಿಂದಾಗಿ 1.20 ಕೋಟಿಗೂ ಹೆಚ್ಚು ಜನರು ಸಂತ್ರಸ್ಥರಾಗಿದ್ದಾರೆ.ಈ ಪ್ರಕೃತಿ ವಿಕೋಪದಲ್ಲಿ ಅನೇಕರು ಕಣ್ಮರೆಯಾಗಿದ್ದು, ಕೋಟ್ಯಂತಕ ರೂ.ಗಳಷ್ಟು ಆಸ್ತಿಪಾಸ್ತಿ ಮತ್ತು ಬೆಳೆ ನಷ್ಟ ಸಂಭವಿಸಿದೆ.

ಮುಂಗಾರು ಮಳೆ ದೇಶದ 16 ರಾಜ್ಯಗಳಲ್ಲಿ ಜಲಪ್ರಳಯ ಸ್ಥಿತಿಗೆ ಕಾರಣವಾಗಿದ್ದು, ಅನೇಕ ನದಿಗಳು, ಉಪ ನದಿಗಳು ಮತ್ತು ಜಲಾಶಯಗಳು ಭರ್ತಿಯಾಗಿ ಅಪಾಯಮಟ್ಟದಲ್ಲಿ ಭೋರ್ಗರೆಯುತ್ತಿದೆ.

ಕೇರಳ, ಕರ್ನಾಟಕ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ಅಸ್ಸಾಂ, ಗುಜರಾತ್, ಅರುಣಾಚಲಪ್ರದೇಶ ಮೊದಲಾದ ರಾಜ್ಯಗಳಲ್ಲಿ ಈವರೆಗೆ 900ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಕೃತ ಅಂಕಿ ಅಂಶಗಳು ಹೇಳಿವೆ.

ಈ ರಾಜ್ಯಗಳಲ್ಲಿ ಈವರೆಗ 1.20 ಕೋಟಿಗೂ ಹೆಚ್ಚು ಮಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆ, ಬೀಕರ ಪ್ರವಾಹ ಮತ್ತು ಭೂಕುಸಿತಗಳಿಗೆ ಅಸ್ತಿಪಾಸ್ತಿಗಳು ಮತ್ತು ಲಕ್ಷಾಂತರ ಹೆಕ್ಟೇರ್‍ಗಳಷ್ಟು ಕೃಷಿ ಬೆಳೆಗಳಿಗೆ ಹಾನಿಯಾಗಿವೆ.

ದೇಶದ ಇನ್ನೂ ಕೆಲವು ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಬಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.

Facebook Comments

Sri Raghav

Admin