ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡ್ ನಲ್ಲಿರುವ ಪ್ರಥಮ ವರ್ಷದ ಪದವಿ ಓದುತ್ತಿರುವ ವಿದ್ಯಾರ್ಥಿಗಳೀಗೆ ಇಂದು ಸ್ಥಳೀಯ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರು ಅನುದಾನ ದಡಿ ಸ಻ರಿ ಸುಮಾರು 200 ಲ್ಯಾಪ್ ಟ್ಯಾಪ್ ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿ ಚಾಲನೆ ನೀಡಿದ ಸ್ಥಳೀಯ ಶಾಸಕರು ಹಾಗೂ ಆಹಾರ ನಾಗರಿಕ ಪೂರೈಕೆ ಸರಬರಾಜು ಇಲಾಖೆ ಸಚಿವರಾದ ಶ್ರೀ ಕೆ ಗೋಪಾಲಯ್ಯ ಅವರು ಮಾತನಾಡಿ ಬಹುಶಃ ನೀವೆಲ್ಲ ಅದೃಷ್ಟವಂತರು ಎಂದರೆ ತಪ್ಪಾಗಲಾರದು,ಯಾಕಂದ್ರೆ ಸರ್ಕಾರ ಮತ್ತು ಬಿಬಿಎಂಪಿ ನಿಮಗೆ ಇಂದು ನಿಮ್ಮ ಉನ್ನತ ಶಿಕ್ಷಣಕ್ಕೆ ಅನುಕೂಲ ವಾಗಾಲೆಂದು ನನ್ನ ಹಾಗೂ ಪಾಲಿಕೆ ಸದಸ್ಯರ ಅನುದಾನದ ಅಡಿಯಲ್ಲಿ ಈ. ಲ್ಯಾಪ್ ಟ್ಯಾಪ್ ನ್ನೂ ನೀಡುತ್ತಿದ್ದೇವೆ.

ಎಲ್ಲರೂ ಚೆನ್ನಾಗಿ ಓದಿ ನಿಮ್ಮ ತಂದೆ ತಾಯಿ ಹಾಗೂ ಊರಿಗೆ ಒಳ್ಳೆಯ ಹೆಸರು ತರಬೇಕು ಹಾಗೂ ಒಳ್ಳೆಯ ಅಂಕ ಪಡೆದು. ಒಳ್ಳೆಯ ಸರ್ಕಾರಿ ಹುದ್ದೆ ಪಡೆದು ಸ್ವಾವಲಂಬಿಯಾಗಿ ಬದುಕು ಸಾಗಿಸಬೇಕು ತಂದೆ ತಾಯಿಯ ವರನ್ನ ಚೆನ್ನಾಗಿ ಸಾಕಬೇಕು.

ಇದರ ಮಧ್ಯ ಕೋವಿಡ್-19 ಕೊರೊನಾ ನಿಯಂತ್ರಣಕ್ಕೆ ತರಲು ವಿದ್ಯಾವಂತರಾದ ನೀವೆಲ್ಲರೂ ಸಹಕರಿಸಬೆಕು .ನಿಮ್ಮ ಮನೆ ,ಏರಿಯಾ, ಎಲ್ಲವನ್ನು ಸುರಕ್ಷ ತೇ ಯಿಂದ ನೋಡಿಕೊಳ್ಳಬೇಕು ಏನಾದ್ರೂ ಹೆಲ್ಪ್ ಬೇಕಿದ್ರೆ ನನ್ನ ಕಚೇರಿಗೆ ಬನ್ನಿ ನಿಮಗೆ 15 ದಿನಕಾಗುವಷ್ಟು ಔಷಧಿಯನ್ನು ನೀಡುತ್ತೇನೆ.

ಯಾರು ಧೃತಿ ಗೆಡದೆ ಜೀವನ ನಡೆಸಬೇಕು.ಇನ್ನೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 3 ಸರ್ಕಾರಿ ಸ್ಮಾರ್ಟ್ ಶಾಲೆಗಳನ್ನು ಕಟ್ಟಡಗಳನ್ನುಉನ್ನತಿಗೊಳಿಸಿ ವಿಶ್ವದರ್ಜೆಯ ಶಿಕ್ಷಣವನ್ನು ನೀಡಲು ಎಲ್ಲರಿತಿಯ ಕೆಲಸ ಮಾಡುತ್ತಿದ್ದೇನೆ, 50 ಬೆಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಾನ್ನೂ ಸಮೀಪದ ಕಮಲಾನಗರದಲ್ಲಿ ನಿರ್ಮಿಸುತ್ತಿದ್ದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಆರೋಗ್ಯದ ದೃಷ್ಟಿಯಿಂದ ಈ ಆಸ್ಪತ್ರೆ ಕಟ್ಟಿಸಲಾಗುತ್ತದೆ ಎಂದರು.

ಸ್ಥಳೀಯ ಪಾಲಿಕೆ ಸದಸ್ಯರಾದ ಶ್ರೀ ಭಧ್ರೆಗೌಡರು ಮಾತನಾಡಿ ಎಲ್ಲರೂ ಈ ಲ್ಯಾಪ್ ಟ್ಯಾಪ್ ನ್ನೂ ಸರಿಯಾಗಿ ಬಳಕೆಮಾಡಿಕೊಳ್ಳಿ. ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಯಾರಿಗಾದರೂ ಕೋವಿಡ್ ಕೋರೊನಾ ಟೇಸ್ಟ್ ಮಾಡಿಸಿಕೊಳ್ಳಬೆಕಿದ್ದಲ್ಲಿ ಶಾಸಕರು ಕೊವಿಡ್ ವಾರ್ ರೂಮ್ ಆರಂಭಿಸಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕುಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಉಪ ಮಹಾಪೌರರಾದ ಎಸ್ ಹರೀಶ್, ಸ್ಥಳೀಯ ಬಿಜೆಪಿ ಮುಖಂಡರುಗಳಾದ ಶಿವಾನಂದ್ ಮೂರ್ತಿ,ವೀರಭದ್ರಪ್ಪ, ಗಂಗ ಹನುಮಯ್ಯ ಬಿಬಿಎಂಪಿ ಅಧಿಕಾರಿಗಳಾದ ಶ್ರೀ ತಿಮ್ಮರಸು, ಶಾಂತೇಗೌಡ, ಸೇರಿದಂತೆ ವಿದ್ಯಾರ್ಥಿಗಳು ಪೋಷಕರು ಮತ್ತು ಕಾರ್ಯ ಕರ್ತರು ಉಪಸ್ಥಿತರಿದ್ದರು.

Facebook Comments

Sri Raghav

Admin