ಲಾರಿ ಪಲ್ಟಿ : ತಪ್ಪಿದ ಭಾರೀ ಅನಾಹುತ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಮಾ.17- ಮಡ್ಡಿ ತುಂಬಿಕೊಂಡು ಬರುತ್ತಿದ್ದ ಲಾರಿ ಪಲ್ಟಿ ಹೊಡೆದು ಅದೃಷ್ಟವಶಾತ್ ವಿದ್ಯುತ್ ಕಂಬಕ್ಕೆ ಡಿಕ್ಕಿ ತಪ್ಪಿದ ಪರಿಣಾಮ ಭಾರೀ ಅನಾಹುತ ತಪ್ಪಿದಂತಾಗಿದ್ದು, ಪ್ರಾಣಾಪಾಯದಿಂದ ಚಾಲಕ ಪಾರಾದ ಘಟನೆ ಪಟ್ಟಣದ ಹೊರವಲಯದ ಕುಣಿಗಲ್ ಬಳಿ ನಡೆದಿದೆ.

ಭಾರತಿನಗರದ ಚಾಮುಂಡೇಶ್ವರಿ ಮೈ ಶುಗರ್ ಕಾರ್ಖಾನೆಯಿಂದ ಮಳವಳ್ಳಿ ಭಾಗದ ಜಮೀನುಗಳಿಗೆ ಮಡ್ಡಿ ಹಾಕಲು ಬರುತ್ತಿದ್ದಾಗ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ. ಈ ಅಪಘಾತದಿಂದ ಎರಡು ವಿದ್ಯುತ್ ಕಂಬ ಮುರಿದು ಬಿದ್ದು, ತಕ್ಷಣ ಸೆಸ್ಕಾಂ ಅಧಿಕಾರಿಗಳು ವಿದ್ಯುತ್ ನಿಲ್ಲಿಸಿ ಹೆಚ್ಚಿನ ಅವಘಡ ತಪ್ಪಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments