ರಾಯಭಾಗ ಬಸ್ ನಿಲ್ದಾಣದಲ್ಲಿ ದಾಂಧಲೆ ಲಾಠಿ ಚಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಭಾಗ, ಮೇ 30- ಜೆಲ್ಲಿ ಕ್ರಷರ್ ಸ್ಥಳಾಂತರ ಸಂಬಂಧ ಉಂಟಾದ ಗಲಾಟೆ ನಿಯಂತ್ರಿಸಲು ನಡೆದ ಲಘು ಲಾಠಿಪ್ರಹಾರದ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ನಂದಿಕುಳಿ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ ಪರಿಣಾಮ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಎರಡು ಸಾರಿಗೆ ಬಸ್‍ಗಳ ಗಾಜು ಪುಡಿಪುಡಿ ಮಾಡಿದ ಗ್ರಾಮಸ್ಥರು ಬಸ್  ನಿಲ್ದಾಣದಲ್ಲಿನ ಕಂಟ್ರೋಲ್‍ರೂಂ, ಕಂಪ್ಯೂಟರ್‍ಗಳನ್ನು ದ್ವಂಷಗೊಳಿಸಿದ್ದು, ಬಸ್ ನಿಲ್ದಾಣದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.

ನಂದಿಕುಳಿ ಗ್ರಾಮದಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ ರಾಯಭಾಗದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿ ಸ್ಥಳೀಯರು ಅಘೋಷಿತ ಬಂದ್ ಆಚರಿಸುತ್ತಿದ್ದು, ಬಸ್‍ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕಲ್ಲು ತೂರಾಟದ ವೇಳೆ ಬಸ್‍ನಲ್ಲಿದ್ದ ಒಬ್ಬ ಪ್ರಯಾಣಿಕನ ಕಣ್ಣಿಗೆ ತೀವ್ರ ಗಾಯವಾಗಿದ್ದು, ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.  ಲಾಠಿ ಪ್ರಹಾರದಿಂದ ಮಹಿಳೆ ಸಾವನ್ನಪ್ಪಿಲ್ಲ. ಬದಲಿಗೆ ಗಲಾಟೆ ನಡೆದಾಗ ಅಲ್ಲಿಂದ ತೆರಳಿದ ಗುಂಪಿನಲ್ಲಿ ಹೋಗುತ್ತಿದ್ದ ಮಹಿಳೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಎಸ್‍ಪಿ ಸುಧೀರ್‍ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin