ಅಕ್ಟೋಬರ್‌ನಲ್ಲಿ ಕಾನೂನು ಪದವಿ ಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.26- ಕಾನೂನು ಪದವಿ ಅಂತಿಮ ವರ್ಷದ ಪರೀಕ್ಷೆಗಳನ್ನು ಅಕ್ಟೋಬರ್‍ನಲ್ಲಿ ನಡೆಸುತ್ತೇವೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್‍ಲೈನ್ ಮೂಲಕ ತರಗತಿಗಳನ್ನು ನಡೆಸಲು ತೀರ್ಮಾನಿಸಿದ್ದೇವೆ. ಲಾಕ್‍ಡೌನ್ ಮಾರ್ಚ್‍ನಲ್ಲಿ ಆರಂಭವಾದ ಕಾರಣ ಮೂರು ತಿಂಗಳು ತರಗತಿಗಳು ನಡೆದಿಲ್ಲ.

ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿ ದ್ದರು. ಹಾಗಾಗಿ ಪರೀಕ್ಷೆ ಗಳನ್ನು ಅಕ್ಟೋಬರ್‍ನಲ್ಲೇ ನಡೆಸುತ್ತೇವೆ ಎಂದು ತಿಳಿಸಿದರು.

ಸೆಪ್ಟೆಂಬರ್‍ನಲ್ಲಿ ತರಗತಿಗಳು ಆರಂಭವಾಗುತ್ತವೆ. ಆನ್‍ಲೈನ್ ನಲ್ಲಿಯೂ ತರಗತಿಗಳು ಶುರುವಾಗುತ್ತವೆ. ಈಗಿರುವ ಸೆಮಿಸ್ಟರ್‍ನಿಂದ ಮುಂದಿನ ಸೆಮಿಸ್ಟರ್‍ಗೆ ಪ್ರಮೋಟ್ ಮಾಡುತ್ತೇವೆ.

ಹಾಲಿ ಸೆಮಿಸ್ಟರ್ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು. ಆಗಿದ್ದಾಗ ಮಾತ್ರ ಅಂತಿಮ ವರ್ಷದಲ್ಲಿ ಉತ್ತೀರ್ಣ ಎಂದು ಪರಿಗಣಿಸಲಾಗುವುದು. ಪ್ರಥಮ ವರ್ಷದಿಂದ ನಾಲ್ಕನೇ ವರ್ಷದ ಪರೀಕ್ಷೆಗಳು ಅಕ್ಟೋಬರ್ ನಲ್ಲಿ ನಡೆಸಲು ತೀರ್ಮಾನಿಸಿದ್ದೇವೆ ಎಂದರು.

Facebook Comments

Sri Raghav

Admin