ಸಿದ್ದರಾಮಯ್ಯ ವಿರುದ್ಧ ವಕೀಲರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಕೆ.ಆರ್.ಪೇಟೆ, ಜ.24- ಮೈಸೂರಿನಲ್ಲಿ ಫ್ರೀಕಾಶ್ಮೀರ ಫಲಕ ಪ್ರದರ್ಶನದಲ್ಲಿ ದೇಶದ್ರೋಹ ಆರೋಪ ಎದುರಿಸುತ್ತಿರುವ ನಳಿನಿ ಪ್ರಕರಣದಲ್ಲಿ ಹೇಳಿಕೆ ನೀಡುವಾಗ ಮಾಜಿ ಸಿಎಂ ಸಿದ್ದರಾಮಯ್ಯನವರು ವಕೀಲರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ತಾಲೂಕು ವಕೀಲರ ಸಂಘದ ಸದಸ್ಯರು ನ್ಯಾಯಾಲಯಗಳ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸ್ವತಃ ತಾವೇ ವಕೀಲರಾಗಿರುವ ಸಿದ್ದರಾಮಯ್ಯ ಅವರು ವಕೀಲರನ್ನು ಗೂಂಡಾಗಳು ಎಂದು ಅಪಮಾನ ಮಾಡಿರುವುದು ಅವರ ಘನತೆಗೆ ತಕ್ಕುದಲ್ಲ. ಕೂಡಲೇ ರಾಜ್ಯದ ವಕೀಲರನ್ನು ಬಹಿರಂಗ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾನಿರತ ವಕೀಲರು ಎಚ್ಚರಿಸಿದರು. ರಾಜ್ಯದಲ್ಲಿ ಲಕ್ಷಾಂತರ ವಕೀಲರು ಕಕ್ಷೀದಾರರನ್ನು ನಂಬಿಕೊಂಡು ಅವರಲ್ಲಿರುವ ಎಲ್ಲಾ ದಾಖಲಾತಿಗನ್ನು ನಮಗೆ ನೀಡಿ ನ್ಯಾಯಾಲಯದಲ್ಲಿ ಕಲಾಪದಲ್ಲಿ ಭಾಗಹಿಸುತ್ತಾರೆ. ಆದರೆ ಸಿದ್ದರಾಮಯ್ಯನವರು ವಕೀಲರ ಮೇಲೆ ಸಮಾಜದಲ್ಲಿ ಅಪನಂಬಿಕೆ ಬರುವಂತೆ ಹೇಳಿಕೆ ನೀಡಿರುವುದು.

ವಕೀಲ ವೃತ್ತಿಯಿಂದಲೇ ಜೀವನ ಆರಂಭಿಸಿ: ಹಿರಿಯ ವಕೀಲ ಬಂಡಿಹೊಳೆ ರಾಮೇಗೌಡ ಅವರು ಮಾತನಾಡಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಶಾಸಕರಾಗಿ, ಸಚಿವರಾಗಿ ರಾಜ್ಯದ ಮುಖ್ಯಮಂತ್ರಿಗಳಾಗಲು ಮುಖ್ಯ ಕಾರಣ ವಕೀಲ ವೃತ್ತಿಯಂದಲೇ ಜೀವನ ಆರಂಭಿಸಿರುವುದು ಎಂಬುದನ್ನು ಅವರು ಮರೆಯಬಾರದು. ಆದರೂ ಸಹ ಅವರು ವಕೀಲರನ್ನು ಟೀಕಿಸಿರುವುದು ಖಂಡನೀಯ ಎಂದರು.

ಹಿರಿಯ ವಕೀಲರಾದ ಕೆ.ಎನ್.ನಾಗರಾಜು, ಬಿ.ಗಣೇಶ್, ಎನ್.ಆರ್.ರವಿಶಂಕರ್, ಎಂ.ಆರ್.ಪ್ರಸನ್ನಕುಮಾರ್, ಹೆಚ್.ರವಿ, ಪುರ ಮಂಜುನಾಥ್, ಬಿ.ಆರ್.ರಾಮೇಗೌಡ, ಎಂ.ವಿ.ಪ್ರಭಾಕರ್, ಸಿ.ಎನ್.ಮೋಹನ್, ಶಂಕರೇಗೌಡ, ಕೆ.ಎನ್.ನಾಗೇಗೌಡ, ಆರ್.ಕೆ.ರಾಜೇಗೌಡ, ಎಂ.ಎನ್.ಅನ್ವೇಶ್, ಕಾಮನಹಳ್ಳಿ ಬೋರೇಗೌಡ, ಸರೋಜಮ್ಮ, ಸ್ವರೂಪ, ರಾಣಿ, ಸುಕನ್ಯಾ, ದೀಪಿಕಾ, ಆಶಾರಾಜೇಗೌಡ, ನಿರಂಜನ್, ಎಸ್.ಪಿ.ಸ್ವಾಮಿ ಸೇರಿದಂತೆ ನೂರಾರು ವಕೀಲರು ಸಿದ್ದರಾಮಯ್ಯನವರ ಹೇಳಿಕೆಯನ್ನು ಖಂಡಿಸಿ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

Facebook Comments