“ಮಲಗಿದ್ದವನನ್ನು ಎಬ್ಬಿಸಿ ಮಂತ್ರಿ ಮಾಡಿದ್ದಾರೆ” : ಡಿಸಿಎಂ ಸವದಿ

ಈ ಸುದ್ದಿಯನ್ನು ಶೇರ್ ಮಾಡಿ

ಬಾಗಲಕೋಟೆ, ನ.4-ಮಲಗಿದ್ದವನನ್ನು ಎಬ್ಬಿಸಿ ಮಂತ್ರಿ ಮಾಡಿದರು, ಹರ ಮುನಿದರೂ ಗುರು ಕಾಯುತ್ತಾನೆ ಎಂಬುದಕ್ಕೆ ಇದೇ ಉದಾಹರಣೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದರು.

ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಳ್ಳಂಗಳ್ಳಿಯಲ್ಲಿ ಏರ್ಪಡಿಸಿದ್ದ ಲಕ್ಷದೀಪೋತ್ಸವ ಕಾರ್ಯಕ್ರಮ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಮಂತ್ರಿಯಾಗುತ್ತೇನೆ ಎಂದು ಕನಸುಮನಸ್ಸಿನಲ್ಲಿ ಅಂದುಕೊಂಡಿರಲಿಲ್ಲ.

ಹರ ಎಂದರೆ ಮತದಾರರು, ಗುರು ಎಂದರೆ ಮಠಾಧೀಶರು. ಈ ಬಾರಿ ನನ್ನ ಮೇಲೆ ಮತದಾರರು ಮುನಿಸಿಕೊಂಡಿದ್ದರು. ಆದರೆ ಮಠಾಧೀಶರು ನನ್ನ ಕೈ ಹಿಡಿದರು. ಹಾಗಾಗಿ ನಾನು ಉಪಮುಖ್ಯಮಂತ್ರಿಯಾಗಲು ಅವಕಾಶವಾಯಿತು ಎಂದು ಅವರು ಹೇಳಿದರು.

ನಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನರ ಸೇವೆಯನ್ನು ಮಾಡುತ್ತೇವೆ. ಕ್ಷೇತ್ರಕ್ಕೂ ಮತ್ತು ಪಕ್ಷಕ್ಕೂ ಒಳ್ಳೆಯ ಹೆಸರು ತರುವುದು ನಮ್ಮ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು. ಪಕ್ಷವನ್ನು ಸದೃಢಗೊಳಿಸುವುದು ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನಗಳು ಬರುವಂತೆ ಮಾಡುವುದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಸವದಿ ಮನವಿ ಮಾಡಿದರು.

Facebook Comments