ತೇಜಸ್‍ನಲ್ಲಿ ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಹಾರಾಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.22- ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ನಗರದ ಏರೋನಾಟಿಕಲ್ ಡೆವಲಪ್‍ಮೆಂಟ್ ಎಸ್ಟಾಬ್ಲಿಶ್ಮೆಂಟ್(ಎಡಿಇ) ಯುದ್ದ ಸಲಕರಣೆಗಳ ವಿನ್ಯಾಸ ಹಾಗೂ ಅಭಿವೃದ್ಧಿಯ ಬಗ್ಗೆ ಪರಿಶೀಲಿಸಿದರು. ಇಂದು ಬೆಳಗ್ಗೆ ತೇಜಸ್ ಲಘು ಯುದ್ದವಿಮಾನದಲ್ಲಿ ಹಾರಾಟ ನಡೆಸಿರುವ ಸಚಿವರು ಅದನ್ನು ಟ್ವೀಟ್ ಮಾಡಿ, ಅದ್ಭುತವಾದ ಅನುಭವ ಎಂದು ಹಂಚಿಕೊಂಡಿದ್ದಾರೆ.

ಯುದ್ದ ವಿಮಾನದ ಕಾಕ್‍ಪಿಟ್‍ನಲ್ಲಿ ಕುಳಿತಿರುವ ಫೋಟೋವನ್ನು ಅವರು ಟ್ವಿಟರ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದಾರೆ. ನಿನ್ನೆ ರಕ್ಷಣಾ ವಲಯದ ಪುನರ್ ಪರಿಶೀಲನಾ ಸಮಿತಿಯ ಸಭೆಯಲ್ಲಿ ಭಾಗವಹಿಸಿದ ರಾಜನಾಥ್ ಸಿಂಗ್ ಅವರು, ಆತ್ಮ ನಿರ್ಭರ್ ಭಾರತದಲ್ಲಿ ಯುದ್ದ ಸಲಕರಣೆಯಲ್ಲಿ ನಾವು ಸ್ವಾವಲಂಬಿಯಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2024ರ ವೇಳೆಗೆ 1.75 ಲಕ್ಷ ಕೋಟಿ ವಹಿವಾಟು ನಡೆಸುವ ಗುರಿಯಿದ್ದು, 35 ಸಾವಿರ ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಾಗ್ರಿಗಳನ್ನು ರಫ್ತು ಮಾಡುವ ಉದ್ದೇಶವಿದೆ. 7 ಸಾರ್ವಜನಿಕ ಉದ್ದಿಮೆಗಳ ಜೊತೆ ವ್ಯವಹರಿಸಲಾಗುತ್ತಿದೆ. 66 ಸಾವಿರ ಕೋಟಿ ರೂ. ಮೌಲ್ಯದ 66 ಗುತ್ತಿಗೆಗಳನ್ನು ಸಶಸ್ತ್ರ ಪಡೆಗಳು ನೀಡಿವೆ.

ರಾಜನಾಥ್ ಸಿಂಗ್ ಅವರು ರಾಜ್ಯ ಪ್ರವಾಸದಲ್ಲಿ ಮಹತ್ವದ ಪರಾಮರ್ಶೆಗಳನ್ನು ನಡೆಸಿ ರಕ್ಷಣಾ ಕ್ಷೇತ್ರದ ಉತ್ಪಾದನೆ ಮತ್ತು ವಿನ್ಯಾಸವನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು ಅಕಾರಿಗಳಿಗೆ ಸೂಚನೆ ನೀಡಿದ್ದಾರೆ.

Facebook Comments