ಕೆಲಸ ವಿಲ್ಲದೆ ಒಂದೋತ್ತಿನ ಊಟಕ್ಕೂ ಪರದಾಟ, ನಗರ ತೊರೆಯುತ್ತಿರುವ ಕಾರ್ಮಿಕರು
ಬೆಂಗಳೂರು.ಮೇ.13 ಬದುಕು ಕಟ್ಟಿಕೊಟ್ಟನಗರದಲ್ಲಿ ಕರೋನಾ ಲಾಕ್ಡೌನ್ ನಿಂದ ಕೆಲಸ ವಿಲ್ಲದೆ ಒಂದೋತ್ತಿನ ಊಟಕ್ಕೂ ತೊಂದರೆಯಾಗಿದ್ದು. ದೈರ್ಯ ದಿಂದ ಉಳಿದ್ದಿದ್ದ ಕೂಲಿ ಕಾರ್ಮಿಕರು ವಿಧಿಯಿಲ್ಲದೆ ತವರಿನತ್ತ ತೆರಳುತ್ತಿದ್ದಾರೆ. ಜನಾತಾ ಕಫ್ಯೂ ಜಾರಿಯಾದಾಗಿನಿಂದ ಕೂಲಿ ಕಾರ್ಮಿಕರ ವಲಸೆ ಮುಂದು ವರೆಯುತ್ತಲೆ ಇದೆ ಪ್ರಾರಂಭದಲ್ಲಿ ಭಯದಿಂದ ಹೆದರಿ ಉತ್ತರ ಪ್ರದೇಶ. ಮಧ್ಯಪ್ರದೇಶ.ಒಡಿಶಾ. ರಾಜಾಸ್ಥಾನ. ಸೆರಿದಂತೆ ನೆರೆರಾಜ್ಯದ ಕಾರ್ಮಿಕರು ಗಂಟು ಮೂಟೆ ಸಮೇತ ತೆರಳಿದ್ದರು.
ಆದರೂ ಕರೋನಾಗೆ ಹೆದರದೆ ಧೈರ್ಯ ದಿಂದ ಗಟ್ಟಿ ಮನಸ್ಸು ಮಾಡಿಕೊಂಡು ಇಲ್ಲೆ ಉಳಿದಿದ್ದರು.ದಿನದಿಂದ ದಿನಕ್ಕೆ ಸೊಂಕಿನ ಪ್ರಮಾಣ ಏರಿಕೆ ಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ಲಾಕ್ಡೌನ್ ಜಾರಿಮಾಡಿದ್ದು ಇದರಿಂದ ನಗರದಲ್ಲಿ ಕೆಲಸ ವಿಲ್ಲದೆ.ಒಂದೋತ್ತಿನ ಊಟಕ್ಕೂ ಪರದಾಡುವಂತಾಗಿದೆ.ಕೊನೆಗೆ ದಿಕ್ಕು ತೊಚದೆ ಉಳಿದ ಕೂಲಿ ಕಾರ್ಮಿಕರು ತಮ್ಮತಮ್ಮ ಊರುಗಳತ್ತ ಪಯಣ ಮುಂದುವರೆಸಿದ್ದಾರೆ.
ಇಂದು ನಗರದ ಕ್ರಾಂತಿ ವಿರ ಸಂಗೋಳ್ಳಿ ರಾಯಣ್ಣ.ಹಾಗೂ ಯಶವಂತಪುರ ರೈಲು ನಿಲ್ದಾಣಕ್ಕೆ ಗಂಟು ಮೂಟೆ ಸಮೆತ ವಲಸಿಗರು ಆಗಮಿಸಿದ್ದರು.
ಪ್ರಾರಂಭದಲ್ಲಿ ಕೆಲಸ ಇತ್ತು ಆದರೆ ಕೆಲ ಮಾಲಿಕರು ಕಟ್ಟಡ ಕೆಲಸಗಳನ್ನು ಸ್ಥಗಿತ ಮಾಡಿದ್ದಾರೆ ಇದರಿಂದ ಕೆಲಸ ವಿಲ್ಲದೆ ರೂಂ ಬಾಡಿಗೆ ಕೂಡ ಕಟ್ಟಲಾಗುತ್ತಿಲ್ಲ ಜೊತೆಗೆ ಊಟದ ಸಮಸ್ಯೆ ಎದುರಾಗಿದೆ ಹಾಗಾಗಿ ನಗರ ತೊರೆಯುವ ಅನಿವಾರ್ಯ ಎದುರಾಗಿದೆ ಎಂದು ಉತ್ತರ ಪ್ರದೇಶ ದ ಗ್ರಾನೈಟ್ ಕೆಲಸಗಾರೊಬ್ಬರು ತಿಳಿಸಿದ್ದಾರೆ.
ಸದ್ಯಕ್ಕೆ ಇದು ಈ ತಿಂಗಳಿಗೆ ಮುಗಿಯುವ ಲಕ್ಷಷಗಳು ಕಾಣ್ತಾಇಲ್ಲ ಕೆಲಸ ಕಾರ್ಯ ವಿಲ್ಲದೆ ಸುಖಾ ಸುಮ್ನೆ ಮನೆಯಲ್ಲೆ ಕುಳಿತು ಇಷ್ಟು ದಿನ ಕೆಲಸ ಮಾಡಿ ಕೂಡಿಟ್ಟ ಹಣವನ್ನು ಖರ್ಚು ಮಾಡಿಕೊಳ್ಳುವುದಕ್ಕಿಂತ ಊರಿಗೆ ಹೊಗುವುದೆ ಸರಿ ಎಂದು ಪಂಜಾಬ್ ನ ಕಾರ್ಮಿಕರೊಬ್ಬರು ತಿಳಿಸಿದ್ದಾರೆ.
ಹೆಗೋ ಇಷ್ಟು ದಿನ ಕರೋನಾಗೆ ಹೆದರದೆ ದೈರ್ಯ ಮಾಡಿಕೊಂಡು ಉಳಿದಿದ್ದೆವು ಆದರೆ ಇತ್ತಿಚಿನ ದಿನಗಳಲ್ಲಿ ಸೊಂಕು ಹಾಗೂ ಮೃತರ ಸಂಖ್ಯೆ ಗಮನಿಸಿದರೆ ನಮಗೂ ಜಿವದ ಮೆಲೆ ಭಯ ಬಂದಿದೆ ಇಲ್ಲಿ ಇದ್ದು ಬೆಡ್ ಸಿಗದೆ ಎಲ್ಲರೂಬಿದ್ದು ಅನಾಥರಾಗಿ ಸಾಯುವುದಕ್ಕಿಂತ ಹುಟ್ಟೂರಿಗೆ ಹೊಗೊಣ ಎಂದು ಕೂಲಿ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.
ಒಟ್ಟಿನಲ್ಲಿ ಕರೋನಾ ದಿಂದ ಇಡಿ ಬೆಂಗಳೂರೆ ಭಾಗಶಃ ಖಾಯಿಯಾದಂತಾಗಿದೆ.