ಬೈರುತ್‍ನಲ್ಲಿ ಭಾರೀ ಸ್ಫೋಟದ ಹಿನ್ನೆಲೆಯಲ್ಲಿ ಲೆಬನಾನ್ ಸರ್ಕಾರ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

ಭೈರುತ್, ಆ.11- ಸುಮಾರು 170 ಮಂದಿ ಬಲಿಯಾಗಿ, 6,000ಕ್ಕೂ ಹೆಚ್ಚು ಜನ ಗಾಯಗೊಂಡ ಬೈರತ್ ನಗರದ ಭಾರೀ ಸ್ಫೋಟದ ಹಿನ್ನೆಲೆಯಲ್ಲಿ ಲೆಬನಾನ್ ಸರ್ಕಾರವೇ ರಾಜೀನಾಮೆ ನೀಡಿದೆ.

ಇಡೀ ಬೈರತ್ ನಗರವನ್ನೇ ಬೆಚ್ಚಿ ಬೀಳಿಸಿದ್ದ ಸ್ಫೋಟದಿಂದಾಗಿ ಅಪಾರ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟದ ನಂತರ ಸರ್ಕಾರದ ವಿರುದ್ಧ ದೇಶದ ಜನರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಲೆಬನಾನ್ ಪ್ರಧಾನಮಂತ್ರಿ ಹಸನ್ ದಿಯಬ್ ಮತ್ತು ಅವರ ಮಂತ್ರಿಮಂಡಲ ರಾಜೀನಾಮೆ ಸಲ್ಲಿಸಿದೆ. ತಮ್ಮ ಸಂಪುಟದ ಮೂವರು ಹಿರಿಯ ಸಚಿವರು ರಾಜೀನಾಮೆ ನೀಡಿದ ನಂತರ ದೂರದರ್ಶನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಸಂಕ್ಷಿಪ್ತ ಭಾಷಣ ಮಾಡಿದ ಪ್ರಧಾನಿ ಹಸನ್, ತಾವು ಮತ್ತು ತಮ್ಮ ಸರ್ಕಾರ ಪದತ್ಯಾಗ ಮಾಡುವುದಾಗಿ ಘೋಷಿಸಿದರು.

ರಾಜಕೀಯ ಬಿಕ್ಕಟ್ಟು, ಆಂತರಿಕ ಸಂಘರ್ಷ, ಭಾರೀ ಭ್ರಷ್ಟಾಚಾರಗಳ ಸುಳಿಗೆ ಸಿಲುಕಿರುವ ಪ್ರಧಾನಿ ಹಸನ್ ನೇತೃತ್ವದ ಸರ್ಕಾರದ ವಿರುದ್ದ ಸ್ಫೋಟ ಪ್ರಕರಣದ ನಂತರ ದೇಶದ ಜನರು ತಿರುಗಿ ಬಿದ್ದು ವ್ಯಾಪಕ ಪ್ರತಿಭಟನೆ ನಡೆಸಿದ್ದರು.

Facebook Comments

Sri Raghav

Admin