ಕಿರುತೆರೆ ನಟಿ ಲೀನಾ ಆಚಾರ್ಯ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ನ.22- ಕ್ಲಾಸ್ ಆಫ್ 2020 ವೆಬ್ ಸೀರಿಸ್ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಕಿರುತೆರೆ ನಟಿ ಲೀನಾ ಆಚಾರ್ಯ ಸಾವನ್ನಪ್ಪಿದ್ದಾರೆ. ಹಲವು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಲೀನಾ ಆಚಾರ್ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಲೀನಾ ಆಚಾರ್ಯ ಅವರು ಸೇಥ್ ಜಿ, ಆಪ್ ಕೆ ಆ ಜೇನ್ ಸೆ, ಮೇರಿ ಹನಿಕಾರಕ್ ಬಿವಿ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದರು. ನಟ ಅಭಿಷೇಕ್ ಗೌತಮ್ ಟ್ವೀಟ್ ಮಾಡಿ, ಲೀನಾ ಆಚಾರ್ಯ ಅವರು ಸ್ನೇಹಜೀವಿಯಾಗಿದ್ದರೂ, ಯಾವಾಗಲೂ ಇತರ ಕಲಾವಿದರ ಸಂಕಷ್ಟಕ್ಕೆ ಮಿಡಿಯುತ್ತಿದ್ದರು, ಅವರ ಅಗಲಿಕೆಯಿಂದ ಉತ್ತಮ ಸ್ನೇಹಿತೆಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಅವರು ಹೇಳಿದ್ದಾರೆ.

ಲೀನಾ ಆಚಾರ್ಯ ನಟಿಸಿದ್ದ ಕ್ಲಾಸ್ ಆಫ್ 2020 ವೆಬ್ ಸೀರಿಸ್‍ನ ಸಹನಟ ರೋಹನ್ ಮೆಹ್ರಾ ಸೇರಿದಂತೆ ಬಾಲಿವುಡ್‍ನ ಕಿರುತೆರೆಯ ಹಲವು ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಹಾಗೂ ಕಲಾವಿದರು ಲೀನಾ ಆಚಾರ್ಯ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Facebook Comments