ಬೋನಿಗೆ ಬಿದ್ದ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮಾ.4- ಬೆಳ್ಳಂ ಬೆಳಗ್ಗೆ ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ತುಂಬಲ ಗ್ರಾಪಂ ವ್ಯಾಪ್ತಿಯ ಬಟ್ಟಳ್ಳಿಗೆ ಹುಂಡಿ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ ಸಿಕ್ಕಿ ಬಿದ್ದಿದೆ.ತುಂಬಲ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು.

ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ್ದರು. ಅರಣ್ಯಾಧಿಕಾರಿಗಳು ಬಟ್ಟಳ್ಳಿಗೆ ಹುಂಡಿ ಗ್ರಾಮದ ಮಮಹದೇವ್ ಎಂಬುವರ ಮನೆ ಬಳಿ ಬೋನ್ ಇರಿಸಿದ್ದರು. ಇಂದು ಮುಂಜಾನೆ ಈ ಬೋನಿಗೆ 2 ವರ್ಷದ ಗಂಡು ಚಿರತೆ ಸಿಕ್ಕಿ ಬಿದ್ದಿದೆ. ತುಂಬಲ ಗ್ರಾಪಂ ವ್ಯಾಪ್ತಿಯಲ್ಲಿ ಇಂದು ಸಿಕ್ಕಿರುವದೂ ಸೇರಿ ಒಟ್ಟು ಆರು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.
ಡಿಆರ್‍ಎಫ್‍ಒ ಮಂಜುನಾಥ್ ವೈದ್ಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸುರಕ್ಷಿತವಾಗಿ ಬೇರೆಡೆ ಸಾಗಿಸಿದರು.

Facebook Comments