ಬೋನಿಗೆ ಬಿದ್ದ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ

ದಾಬಸ್‍ಪೇಟೆ,ಜೂ.12- ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಸೀಗೆಪಾಳ್ಯ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಇಂದು ಮುಂಜಾನೆ 4 ವರ್ಷದ ಗಂಡು ಚಿರತೆ ಸಿಕ್ಕಿಬಿದ್ದಿದೆ. ಶಿವಗಂಗೆ ಹಾಗೂ ಸೀಗೇಪಾಳ್ಯದ ಸುತ್ತಮುತ್ತ ಹಸು, ಕೋಳಿ, ಮೇಕೆ , ಕುರಿ ನಾಯಿಗಳನ್ನು ಈ ಚಿರತೆ ತಿಂದುಹಾಕುತ್ತಿದ್ದು, ಇದರಿಂದ ಸ್ಥಳೀಯರು ಆತಂಕದಲ್ಲಿ ಕಾಲಕಳೆಯುವಂತಾಗಿತ್ತು.

ಜನಗಳ ಒತ್ತಾಯದ ಮೇರೆ ಒಂದು ತಿಂಗಳಿಂದ ಅರಣ್ಯದಿಕಾರಿಗಳು ಚಿರತೆ ಹಿಡಿಲು ಬೋನ್ ಇರಿಸಿದ್ದರು. ಇಂದು ಮುಂಜಾನೆ ಚಿರತೆ ಬೋನಿಗೆ ಸಿಕ್ಕಿಬಿದ್ದಿದೆ. ಇದರಿಂದ ಗ್ರಾಮಸ್ಥರು ನಿಟ್ಟಿಸಿರುಬಿಟ್ಟಿದ್ದಾರೆ. ನೆಲಮಂಗಲ ಅರಣ್ಯ ಆಧಿಕಾ ಗಳಾದ ಶಾಂತಕುಮಾರ್ ಸ್ಥಳಖ್ಕೆ ಭೇಟಿ ನೀಡಿ ಚಿರತೆಯನ್ನು ಬನ್ನೇರುಘಟ್ಟ ಅರಣ್ಯಕ್ಕೇ ರವಾನಿಸಿದ್ದಾರೆ.

Facebook Comments