ಹಂದಿ ದಾಳಿಗೆ ಚಿರತೆ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜ.14- ಚಿರತೆ ಹಾಗೂ ಕಾಡು ಹಂದಿ ನಡುವೆ ನಡೆದ ಭೀಕರ ಕಾಳಗದಲ್ಲಿ ಚಿರತೆ ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲೂಕಿನ ಗಂಗಸಂದ್ರ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ಆಹಾರ ಅರಸಿ ಕಾಡು ಹಂದಿ ಹಾಗೂ ಚಿರತೆ ಗ್ರಾಮದತ್ತ ಬಂದಿದ್ದು, ಈ ವೇಳೆ ಹಂದಿಯನ್ನು ಗಮನಿಸಿದ ಚಿರತೆ ಏಕಾಏಕಿ ಎರಗಿದೆ. ಈ ವೇಳೆ ಎರಡು ಪ್ರಾಣಿಗಳ ನಡುವೆ ಕಾಳಗ ನಡೆದಿದ್ದು , ಹಂದಿ ತನ್ನ ಕೋರೆ ಹಲ್ಲುಗಳಿಂದ ಚಿರತೆಯ ಹೊಟ್ಟೆಯ ಭಾಗಕ್ಕೆ ತಿವಿದು ಗಂಭೀರವಾಗಿ ಗಾಯಗೊಳಿಸಿದೆ.

ನಿತ್ರಾಣಗೊಂಡು ಒದ್ದಾಡುತ್ತಿದ್ದ ಚಿರತೆ ಸಾವನ್ನಪ್ಪಿದೆ. ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದು , ಚಿರತೆಯ ದೇಹದ ಮೇಲೆ ಹಂದಿಯ ಹಲ್ಲುಗಳ ಗುರುತು ಇರುವುದು ಪತ್ತೆಯಾಗಿದೆ.

Facebook Comments