ಬೋನಿಗೆ ಬಿದ್ದ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ

ನಂಜನಗೂಡು, ನ.22- ಚಿನ್ನಂಬಳ್ಳಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಬಲೆಗೆ ಬಿದ್ದಿದೆ.ಈ ಭಾಗದ ಸಾಕು ಪ್ರಾಣಿಗಳನ್ನು ಭಕ್ಷಿಸುತ್ತಾ ಜನರ ನಿದ್ದೆಗೆಡಿಸಿದ್ದ ಚಿರತೆ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಸೆರೆಯಾಗಿದೆ. ಕಳೆದ ಮೂರು ದಿನಗಳ ಹಿಂದೆ ತಗಡೂರು ಗ್ರಾಮದ ಗುರುಮಲ್ಲೇಗೌಡ ಎಂಬುವವರಿಗೆ ಸೇರಿದ ಐದು ಕುರಿಗಳನ್ನು ಈ ಚಿರತೆ ಬಲಿ ಪಡೆದಿತ್ತು.

ಈ ವಿಷಯ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ಲೋಕೇಶ್ ಮೂರ್ತಿ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಗ್ರಾಮದ ಹೊರ ವಲಯದ ಮಹದೇವಪ್ಪ ಎಂಬುವವರ ಜಮೀನಿನಲ್ಲಿ ಬೋನನ್ನು ಇಟ್ಟಿದ್ದರು.  ಕಳೆದ 15 ದಿನಗಳಿಂದ ತಗಡೂರು, ಕೊಮ್ಮಗೆರೆ ಮತ್ತು ಚಿನ್ನಂಬಳ್ಳಿ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ತಡರಾತ್ರಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು ಸ್ಥಳೀಯರಲ್ಲಿದ್ದ ಆತಂಕ ದೂರವಾಗಿದೆ.

ಸ್ಥಳಕ್ಕೆ ಉಪ ಅರಣ್ಯಾಧಿಕಾರಿ ಶಶಿಕುಮಾರ್, ಶಿವನಂಜೇಗೌಡ, ಪುಟ್ಟರಾಜು, ಕೆ.ಎಂ.ರವಿ, ಮಂಜು, ವಾಹನ ಚಾಲಕ ನಾಗು ಭೇಟಿ ನೀಡಿ ಸೆರೆ ಸಿಕ್ಕಿರುವ ಚಿರತೆಯನ್ನು ನಂಜನಗೂಡಿನ ಅರಣ್ಯ ಇಲಾಖೆಗೆ ಸಾಗಿಸಲಾಗಿದ್ದು ಮೇಲಧಿಕಾರಿಗಳ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Facebook Comments