ಕೊನೆಗೂ ಸೆರೆಯಾಯ್ತು 4 ಜನರನ್ನು ಬಲಿ ಪಡೆದ ನರಭಕ್ಷಕ ಚಿರತೆ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಮಾ.18- ನಾಲ್ಕು ಜನರನ್ನು ಬಲಿ ತೆಗೆದುಕೊಂಡು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದ್ದ ನರಭಕ್ಷಕ ಚಿರತೆ ಕೊನೆಗೂ ಇಂದು ಸೆರೆಸಿಕ್ಕಿದೆ. ಕಳೆದ 15 ದಿನಗಳಿಂದಲೂ ನಿರಂತರವಾಗಿ ಚಿರತೆ ಹಿಡಿಯುವಲ್ಲಿ ಕಾರ್ಯಾಚರಣೆ ಕೈಗೊಂಡು ಅರಣ್ಯಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ನಿರತರಾಗಿದ್ದರು. ಕೊನೆಗೂ ಹಾಲನೂರ ಬಳಿ ಇಟ್ಟಿದ್ದ ಬೋನ್‍ಗೆ ಇಂದು ನರಭಕ್ಷಕ ಚಿರತೆ ಸಿಕ್ಕಿಬಿದ್ದಿದೆ.

ಇಬ್ಬರು ಮಕ್ಕಳು, ಇಬ್ಬರು ವೃದ್ಧರನ್ನು ಭಕ್ಷಿಸಿದ್ದ ಈ ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಗ್ರಾಮಸ್ಥರ ತೀವ್ರ ಒತ್ತಡ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಚಿರತೆಯನ್ನು ಹಿಡಿಯುವಂತೆ, ಗುಂಡಿಟ್ಟು ಸಾಯಿಸುವಂತೆಯೂ ಆದೇಶ ನೀಡಿತ್ತು.

ಕಳೆದ ಒಂದು ವಾರದಿಂದ ಎರಡು ಆನೆಗಳ ಮುಖಾಂತರವೂ ಈ ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಹರಸಾಹಸಪಟ್ಟಿದ್ದರು. ಆದರೆ ಅದು ಸಾಧ್ಯವಾಗಿಯೇ ಇರಲಿಲ್ಲ. ಆದರೆ ಇಂದು ಹಾಲನೂರು ಬಳಿ ಇಟ್ಟಿದ್ದ ಬೋನಿಗೆ ಸಿಕ್ಕಿಬಿದ್ದಿದೆ.

ಚಿರತೆ ಮಗುವನ್ನ ಕೊಂದಿದ್ದ ಸ್ಥಳಕ್ಕೆ ಕುದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಸಿ ಮಾಧುಸ್ವಾಮಿ ಅರಣ್ಯ ಇಲಾಖೆಯ ಸಚಿವ ಆನಂದ್ ಸಿಂಗ್ ಇವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಮಾಜಿ ಶಾಸಕ ಸುರೇಶ್ ಗೌಡ ಸೇರಿದಂತೆ ಇತರರು ನರಭಕ್ಷಕ ಚಿರತೆಯನ್ನು ಹತ್ಯೆ ಮಾಡುವಂತೆ ಒತ್ತಾಯಿಸಿದ್ದರು.

Facebook Comments

Sri Raghav

Admin