ಕೊಟ್ಟಿಗೆಗೆ ನುಗ್ಗಿ ಹಸುವಿನ ರಕ್ತಹೀರಿ ಚಿರತೆ ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

Malavalli--01
ಮಳವಳ್ಳಿ, ಜು.8- ಮನೆಯ ಮುಂದಿನ ಕೊಟ್ಟಿಗೆಗೆ ನುಗ್ಗಿದ ಚಿರತೆ ಕೊಟ್ಟಿಗೆಯಲ್ಲಿದ್ದ ಹಸುವನ್ನು ಕೊಂದು ಅದನ್ನು ಬಹುದೂರದ ವರೆಗೆ ಎಳೆದೊಯ್ದಿರುವ ಆಘಾತಕಾರಿ ಘಟನೆ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಅಂಚೆದೊಡ್ಡಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ನೆಲ್ಲೂರು ದೊಡ್ಡೇಗೌಡ ಎಂಬುವರ ಮನೆ ಮುಂಭಾಗವಿರುವ ಕೊಟ್ಟಿಗೆಗೆ ನಿನ್ನೆ ರಾತ್ರಿ 12 ಗಂಟೆ ಸಮಯದಲ್ಲಿ ನುಗ್ಗಿರುವ ಚಿರತೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವೊಂದರ ಕುತ್ತಿಗೆಯನ್ನು ಕಚ್ಚಿ ಅದರ ರಕ್ತವನ್ನು ಹೀರಿದೆ.

ಹಸುವಿನ ಚೀರಾಟ ಹಾಗೂ ನಾಯಿಗಳ ಬೊಗಳುವಿಕೆ ಸದ್ದಿನಿಂದ ಎಚ್ಚರಗೊಂಡ ಮನೆಯವರು ಹೊರಬರುತ್ತಿದ್ದಂತೆ ಹಸುವಿನ ಕುತ್ತಿಗೆಯನ್ನು ಕಚ್ಚಿಕೊಂಡೆ ಬಹುದೂರದವರೆವಿಗೂ ಎಳೆದೊಯ್ದಿರುವ ಚಿರತೆ ಜನರ ಚೀರಾಟದಿಂದಾಗಿ ಹಸುವಿನ ದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದೆ ಎನ್ನಲಾಗಿದೆ.
ಈವರೆಗೆ ಕಾಡುಮೇಡುಗಳ ಪಕ್ಕದ ಗ್ರಾಮಗಳಿಗೆ ಲಗ್ಗೆ ಇಟ್ಟು ಕುರಿಮೇಕೆಗಳನ್ನು ಮಾತ್ರ ಕೊಲ್ಲುತ್ತಿದ್ದ ಚಿರತೆ ಪಟ್ಟಣದ ಪಕ್ಕದಲ್ಲಿರುವ ಗ್ರಾಮಕ್ಕೆ ನುಗ್ಗಿ ಹಸುವನ್ನು ಕೊಂದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಘಟನೆಯ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin