ಗ್ರಾಮಕ್ಕೆ ನುಗ್ಗಿ ಮನೆಯೊಂದರಲ್ಲಿ ಅಟ್ಟವೇರಿ ಕುಳಿತ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ

Chirate--01

ಹಾಸನ, ಜೂ.8- ನಾಯಿಯನ್ನು ಬೇಟೆಯಾಡಲು ಗ್ರಾಮದೊಳಗೆ ನುಗ್ಗಿದ ಚಿರತೆ ಮನೆಯೊಂದರಲ್ಲಿ ಅಟ್ಟವೇರಿರುವ ಘಟನೆ ತಾಲೂಕಿನ ಶಾಂತಿಗ್ರಾಮ ಹೋಬಳಿಯ ನಾಗನಹಳ್ಳಿಯಲ್ಲಿ ನಡೆದಿದೆ.ಆಹಾರ ಅರಸಿಕೊಂಡು ತಡರಾತ್ರಿ ಬಂದ ಚಿರತೆ ಕೃಷ್ಣ ಎಂಬುವವರ ಕೊಟ್ಟಿಗೆ ಮನೆಯ ಮುಖಾಂತರ ಮನೆಯೊಳಗೆ ಪ್ರವೇಶಿಸಿದ್ದು, ಅಟ್ಟದ ಒಳಗೆ ಅಡಗಿ ಕುಳಿತಿದೆ.ಇಂದು ಮುಂಜಾನೆ ಕುಟುಂಬದ ಸದಸ್ಯರು ದೈನಂದಿನ ಕಾರ್ಯಗಳಲ್ಲಿ ನಿರತರಾಗುತ್ತಿದ್ದಂತೆ ಅಟ್ಟದ ಮೇಲೆ ಘರ್ಜನೆ ಸದ್ದು ಕೇಳಿದ ತಕ್ಷಣ ಆತಂಕಗೊಂಡಿದ್ದಾರೆ.

ಬೆಕ್ಕು ಅಥವಾ ನಾಯಿ ಇರಬಹುದೆಂದು ಅನುಮಾನಗೊಂಡು ಮೇಲೆ ಹೋಗಿ ನೋಡಿದಾಗ ಚಿರತೆ ಕಂಡು ಕೂಗಿಕೊಂಡು ಹೊರಗೆ ಓಡಿ ಬಂದಿದ್ದಾರೆ.ಕೂಡಲೇ ಮನೆಯ ಎಲ್ಲ ಬಾಗಿಲುಗಳನ್ನೂ ಬಂದ್ ಮಾಡಿ ಕುಟುಂಬದ ಸದಸ್ಯರು ಮನೆಯ ಹೊರಗೆ ಓಡಿ ಬಂದಿದ್ದಾರೆ. ಏನಾಯಿತು ಎಂದು ಗ್ರಾಮಸ್ಥರು ವಿಚಾರಿಸಿದಾಗ ಚಿರತೆ ಬಂದಿರುವುದು ತಿಳಿದು ಬೆಚ್ಚಿಬಿದ್ದಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಚಿರತೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದರು. ಒಂದೇ ಸಮನೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಕಾರ್ಯಾಚರಣೆಗೆ ತೊಡಕುಂಟಾಗಿದೆ.  ಡಿಎಫ್‍ಒ ಶಿವರಾಮ್‍ಬಾಬು ನೇತೃತ್ವದ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಚಿರತೆಯನ್ನು ಸೆರೆ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.

Facebook Comments

Sri Raghav

Admin