ಮಹಿಳೆ ಮೇಲೆ ಚಿರತೆ ದಾಳಿ, ಪ್ರಾಣಾಪಾಯದಿಂದ ಪಾರು

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ.ಜೂ.2. ಮನೆಯ ಮುಂದೆ ಮಲಗಿದ್ದ ಮಹಿಳೆಯ ಮೇಲೆ ಚಿರತೆ ದಾಳಿ ಮಾಡಿದ್ದು ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹಿರಿಯೂರು ತಾಲೂಕಿನ ಕುರುಬರಹಳ್ಳಿಯಲ್ಲಿ ನಡೆದಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆ ಮನೆಯ ಮುಂದೆ ಮಲಗಿದ್ದ ಮಂಜಿಬಾಯಿ(45) ಎಂಬುವವರ ಮೇಲೆ ದಾಳಿ ಮಾಡಿದ್ದು ಕೈ ಕಾಲುಗಳನ್ನು ಕಚ್ಚಿ ಮನೆಯ ಹಿಂಬಾಗಕ್ಕೆ ಎಳೆದು ಕೊಂಡು ಹೊಗಿದೆ.

ಅತ್ತೆಯ ಚಿರಾಟ ಗಮನಿಸಿದ ಸೊಸೆ ಮನೆಯ ಹಿಂದೆ ಹೊಗಿ ನೊಡಿದ್ದು ಗ್ರಾಮಸ್ಥರನ್ನು ಕರೆದಿದ್ದಾರೆ.ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಗಲಾಟೆ ಮಾಡುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದೆ. ಗಂಭೀರವಾಗಿ ಗಾಯ ಗೊಂಡ ಮಹಿಳೆಯನ್ನು ಹಿರಿಯೂರು ಆಸ್ಪತ್ರೆ ಗೆ ದಾಖಲಿಸಲಾಗಿದೆ.ಅದೃಷ್ಡ ವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Facebook Comments