ಕೋಳಿಗಳನ್ನು ತಿನ್ನಲು ಬಂದು ಬೋನಿಗೆ ಬಿದ್ದ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ

Leopard
ಮಾಗಡಿ, ಜು.21- ಕೋಳಿ ತಿನ್ನಲು ಬಂದ ಚಿರತೆಯೊಂದು ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿದೆ. ತಾಲೂಕಿನ ಹೊನ್ನಸಿದ್ದಯ್ಯನ ಪಾಳ್ಯದ ಗಿರೀಶ್ ಎಂಬುವರ ತೋಟದಲ್ಲಿ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ನುಗ್ಗಿದ ಚಿರತೆ ಬೋನಿಗೆ ಸಿಲುಕಿದೆ. ಕಳೆದ ನಾಲ್ಕು ದಿನಗಳ ಹಿಂದೆ ಮಾಗಡಿ ವಲಯ ಅರಣ್ಯಾಧಿಕಾರಿಗಳು ಗಿರೀಶ್ ಎಂಬುವವರ ತೋಟಕ್ಕೆ ಆಗಾಗ್ಗೆ ದಾಳಿ ಮಾಡುತ್ತಿದ್ದ ಚಿರತೆ ಹಿಡಿಯಲು ಬೋನು ಇರಿಸಿದ್ದರು. ರಾತ್ರಿ ಬೋನಿಗೆ ಸಿಲುಕಿದ್ದ ಚಿರತೆಯನ್ನು ಇಂದು ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಬನ್ನೇರುಘಟ್ಟ ಅರಣ್ಯಕ್ಕೆ ಕರೆದೊಯ್ದಿದ್ದಾರೆ.

Facebook Comments

Sri Raghav

Admin