ಗ್ರಂಥಾಲಯಗಳಿಗೆ ಮರು ನಾಮಕರಣ ಮಾಡಲು ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.25- ಗ್ರಂಥಾಲಯಗಳು ಮಾಹಿತಿಯ ಆಕರಗಳಾಗಿದ್ದು , ಅವುಗಳನ್ನು ಜ್ಞಾನ ಭಂಡಾರಗಳೆಂದು ಮರು ನಾಮಕರಣ ಮಾಡಬೇಕು ಎಂದು ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಸ್. ಅಯ್ಯಪ್ಪನ್ ಸಲಹೆ ನೀಡಿದ್ದಾರೆ.  ನಗರದ ಜಿಕೆವಿಕೆ ಸಭಾಂಗಣದಲ್ಲಿ ನಡೆದ ಕೃಷಿ ಗ್ರಂಥಪಾಲಕರ ಮತ್ತು ಬಳಕೆದಾರರ ಸಮುದಾಯದ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಗ್ರಂಥಾಲಯಗಳು ರೈತರ ಮತ್ತು ಕೃಷಿಗೆ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ಜಗತ್ತು ತಂತ್ರಜ್ಞಾನದ ಬಳಕೆಯ ಬಳಿಕ ಸಂಪರ್ಕದ ವ್ಯವಸ್ಥೆ ಸುಲಭವಾಗಿದೆ. ಯಾವುದೇ ಗ್ರಂಥಾಲಯದಿಂದಾದರೂ ಎಲ್ಲಿ ಕುಳಿತಾದರೂ ಮಾಹಿತಿ ಪಡೆದುಕೊಳ್ಳಲು ಅವಕಾಶವಿದೆ. ಕೃಷಿ ಗ್ರಂಥಾಲಯದಲ್ಲಿ ಲಭ್ಯವಿರುವ ಪ್ರಕಟಣೆಗಳು, ಪ್ರಬಂಧಗಳು, ಲೇಖನಗಳು , ಸಂಶೋಧನಾ ಮಾಹಿತಿಗಳನ್ನು ಪ್ರತಿ ವರ್ಷ ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ಪಡೆಯುತ್ತಿದ್ದಾರೆ. ದಿನೇ ದಿನೇ ಗ್ರಂಥಾಲಯಗಳ ಮಹತ್ವ ಹೆಚ್ಚಾಗುತ್ತಿದೆ ಎಂದರು.

ದೇಶಕ್ಕೆ 300 ಮಿಲಿಯನ್ ಆಹಾರದ ಅಗತ್ಯ ಇದೆ. ಇದರ ಉತ್ಪಾದನೆಗೆ ಆಧುನಿಕ ತಂತ್ರಜ್ಞಾನ ಬಹಳ ಮಹತ್ವದ್ದು. ರೈತರನ್ನು ಜಾಗೃತಗೊಳಿಸುವ ಕಾಲ ಕಾಲಕ್ಕೆ ಅವರಿಗೆ ಅಗತ್ಯವಾದ ನೆರವುಗಳನ್ನು ನೀಡುವ ನಿಟ್ಟಿನಲ್ಲಿ ಗ್ರಂಥಾಲಯಗಳ ಪಾತ್ರ ಬಹಳ ಮಹತ್ವದ್ದಿದೆ ಎಂದು ಅವರು ಹೇಳಿದರು. ಡಿಜಿಟಲ್ ಫ್ಲಾಟ್‍ಫಾರಂ ಮಾಹಿತಿಯ ಹಂಚಿಕೆ ವೇಗವಾಗಿ ನಡೆಯುತ್ತಿದೆ. ನಮ್ಮ ಗ್ರಂಥಾಲಯಗಳಲ್ಲಿ ಆಧುನಿಕತೆಗೆ ಅನುಗುಣ ವಾಗಿ ಮೇಲ್ದರ್ಜೆಗೇರಿಸಬೇಕು ಎಂದರು.

ಕೃಷಿ ವಿವಿಯ ಉಪ ಕುಲಪತಿ ಡಾ.ರಾಜೇಂದ್ರ ಪ್ರಸಾದ್, ಐಸಿಎಆರ್‍ನ ಉಪ ನಿರ್ದೇಶಕ ಡಾ.ಆರ್.ಸಿ.ಅಗರ್‍ವಾಲ್, ಎಎಎಲ್‍ಡಿಐ ಅಧ್ಯಕ್ಷ ಡಾ.ವೀರಾಂಜನೇಯಲು , ಮಾಜಿ ಅಧ್ಯಕ್ಷ ಪ್ರೊ.ಪ್ರೇಮಸಿಂಗ್ , ನಿರ್ದೇಶಕರಾದ ಡಾ.ರತೀಸನಾಪತಿ ಮತ್ತಿತರರು ಹಾಜರಿದ್ದರು.

Facebook Comments