ಪತಿ ಕೊಂದಿದ್ದ ಪತ್ನಿಗೆ ಜೀವಾವಧಿ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜ. 28- ಪತಿಯನ್ನು ಕೊಲೆಗೈದ ಪತ್ನಿಗೆ ಹುಣಸೂರಿನ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪತಿ ಕೃಷ್ಣ ಎಂಬವರನ್ನು ಜೊತೆಗಾರರೊಂದಿಗೆ ಸೇರಿ ಮಂಗಳಮ್ಮ ಎಂಬಾಕೆ ಕೊಲೆ ಮಾಡಿದ್ದರು. ಕೊಲೆ ಮಾಡಿದ್ದ ಮಂಗಳಮ್ಮ ಸೇರಿದಂತೆ ಇಬ್ಬರಿಗೆ ಹುಣಸೂರಿನ ಎಂಟನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.

ಅನೈತಿಕ ಸಂಬಂಧದ ವಿಚಾರವಾಗಿ ಮಂಗಳಮ್ಮ ಮತ್ತು ಕೃಷ್ಣ ನಡುವೆ ಜಗಳ ನಡೆಯುತ್ತಿತ್ತು. ಮಂಗಳಮ್ಮ ಪತಿಯ ಅಣ್ಣನ ಮಗ ಸತೀಶ್ ಜತೆ ಸೇರಿ ಮಚ್ಚು ಮತ್ತು ಹಾರೆಯಿಂದ ಹಲ್ಲೆ ನಡೆಸಿ ಕೃಷ್ಣರನ್ನು ಕೊಲೆ ಮಾಡಿದ್ದರು. ನಂತರ ಶಿವಣ್ಣ ಎಂಬಾತ ಕೃಷ್ಣನ ಮೃತ ದೇಹವನ್ನು ಹೂತು ಹಾಕಿದ್ದರು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ.ಮಧುಸೂದನ್ ಅವರು ಮಂಗಳಮ್ಮ ಮತ್ತು ಸತೀಶ್‍ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಶಿವಣ್ಣನಿಗೆ ನಾಲ್ಕು ವರ್ಷ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಕೆಎಂಸಿ ಶಿವಶಂಕರಮೂರ್ತಿ ವಾದ ಮಂಡಿಸಿದ್ದರು.

Facebook Comments