ಸಿಡಿಲಿನ ಆರ್ಭಟಕ್ಕೆ 32 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಪಾಟ್ನಾ/ಲಕ್ನೋ, ಸೆ.16-ದೇಶದ ಹಲವಡೆ ವರುಣನರೌದ್ರಾವತಾರ ಮುಂದುವರಿದಿದ್ದು, ಬಿಹಾರ ಮತ್ತುಉತ್ತರಪ್ರದೇಶ ರಾಜ್ಯಗಳಲ್ಲಿ ನಿನ್ನೆ ಪ್ರತ್ಯೇಕ ಪ್ರಕರಣಗಳಲ್ಲಿ ಗುಡುಗು-ಸಿಡಿಲಿನ ಆರ್ಭಟಕ್ಕೆ 32 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.

ಬಿಹಾರದಆರು ಜಿಲ್ಲೆಗಳಲ್ಲಿ ಗುಡುಗು ಸಿಡಿಲು ಬಡಿದು 17 ಮಂದಿ ಅಸುನೀಗಿದ್ದರೆ, ಉತ್ತರ ಪ್ರದೇಶದವಿವಿಧ ಸ್ಥಳಗಳಲಿ ಗುಡುಗಿನ ಆರ್ಭಟ 15 ಜನರನ್ನು ಬಲಿ ತೆಗೆದುಕೊಂಡಿದೆ.

ಈ ದುರ್ಘಟನೆಗಳಲ್ಲಿ ಅನೇಕರಿಗೆತೀವ್ರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.  ಬಿಹಾರದಗೋಪಾಲ್‍ಗಂಜ್, ಭೋಜ್‍ಪುರ್, ರೋಹಟಾಸ್, ಸರನ್, ಕೈಮುರ್ ಮತ್ತು ವೈಶಾಲಿ ಜಿಲ್ಲೆಗಳಲ್ಲಿ ಭಾರೀ ಮಳೆಯೊಂದಿಗೆ ಗುಡುಗು-ಸಿಡಿಲಿನ ಅಬ್ಬರಕ್ಕೆಈವರೆಗೆ 17 ಮಂದಿ ಬಲಿಯಾಗಿದ್ದಾರೆಎಂದುಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಬಿಹಾರ ಮುಖ್ಯಮಂತ್ರಿ ನೀತಿಶ್‍ಕುಮಾರ್‍ತಲಾ ನಾಲ್ಕು ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.  ಉತ್ತರ ಪ್ರದೇಶದಲ್ಲೂ ಭಾರೀ ಮಳೆಯೊಂದಿಗೆ ಗುಡುಗು ಸಿಡಿಲಿನ ಬೋರ್ಗರೆತಕ್ಕೆ ಸಾವು ನಾವುಗಳು ಸಂಭವಿಸಿದೆ.

ಘಾಜಿಪುರ್, ಕೌಶಾಂಬಿ, ಖುಷಿನಗರ್, ಚಿತ್ರಕೂಟ, ಜಾನ್‍ಪುರ್ ಮತ್ತುಚೌಡೌಲಿ ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪದಲ್ಲಿ 15 ಮಂದಿ ಅಸುನೀಗಿದ್ದು, ಅನೇಕರುಗಾಯಗೊಂಡಿದ್ದಾರೆಎಂದು ಪರಿಹಾರಆಯುಕ್ತ ಸಂಜಯ್‍ಗೋಯೆಲ್ ತಿಳಿಸಿದ್ದಾರೆ.  ಸಿಡಿಲಿನ ಹೊಡೆತಕ್ಕೆ ಮೃತಪಟ್ಟವರ ಕುಟುಂಬಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯೋಗಿಆದಿತ್ಯನಾಥತಲಾ ನಾಲ್ಕು ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.

Facebook Comments